ETV Bharat / state

ಕೋವಿಡ್-19 ವಾರ್ಡ್​​​​​ನಲ್ಲಿ ಗರ್ಭಿಣಿಯ ನರಳಾಟ: ರಕ್ತ ಸ್ರಾವವಾದರೂ ವೈದ್ಯರು ಬಾರದ ಆರೋಪ!

ರಾಯಚೂರು ನಗರದ ಒಪೆಕ್​​​​​​ನ ಕೋವಿಡ್-19 ವಾರ್ಡ್​​​​​ನಲ್ಲಿರುವ ಗರ್ಭಿಣಿಗೆ ರಕ್ತ ಸ್ರಾವವಾದರೂ ವೈದ್ಯರು ಬರುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

author img

By

Published : Jun 8, 2020, 5:57 PM IST

Pregnant Woman in Covid-19 Ward, Raichur
ಕೋವಿಡ್-19 ವಾರ್ಡ್​​​​​ನಲ್ಲಿ ಗರ್ಭಿಣಿಯ ನರಳಾಟ

ರಾಯಚೂರು: ನಗರದ ಒಪೆಕ್​​​​​​ನ ಕೋವಿಡ್-19 ವಾರ್ಡ್​​​​​ನಲ್ಲಿರುವ ಗರ್ಭಿಣಿಗೆ ರಕ್ತ ಸ್ರಾವವಾದರೂ ವೈದ್ಯರು ಬರುತ್ತಿಲ್ಲವೆಂದು ಐಸೋಲೇಷನ್ ವಾರ್ಡ್​​​​​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ದೂರಿದ್ದಾರೆ.

ದೇವದುರ್ಗದಿಂದ ಬಂದಿರುವ ಗರ್ಭಿಣಿ ನಿನ್ನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ವೈದ್ಯರಿಗೆ ತಿಳಿಸಲಾಗಿದ್ದು, ಆದ್ರೂ ಬಂದಿಲ್ಲ. ಕೇವಲ ಶುಶ್ರೂಷಕರು ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ. ಆದರೆ ಇಂದು ಗರ್ಭಿಣಿಗೆ ರಕ್ತ ಸ್ರಾವವಾದರೂ ವೈದ್ಯರು ಸ್ಪಂದಿಸುತ್ತಿಲ್ಲವೆಂದು ಐಸೋಲೇಷನ್ ವಾರ್ಡ್​​​​ನಲ್ಲಿರುವವರು ವೈದ್ಯರ ನಿರ್ಲಕ್ಷ್ಯ ಖಂಡಿಸಿ ವಿಡಿಯೋ ಮಾಡಿ ಕಳುಹಿಸಿದ್ದಾರೆ.

ಅಲ್ಲದೇ ವಾರ್ಡ್​​​ಗೆ ಸರಿಯಾಗಿ ಊಟ ಸಹ ನೀಡುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸಹ ಸ್ಪಂದನೆ ನೀಡಿಲ್ಲವೆಂದು ದೂರಿ ಮಧ್ಯಾಹ್ನದ ಊಟ ಬಹಿಷ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವಾರ್ಡ್​ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗರ್ಭಿಣಿಗೆ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.