ETV Bharat / state

ಗ್ರಾಪಂ ಚುನಾವಣೆ ದಿನಾಂಕ ಘೋಷಣೆ: ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್ ವಿಳಂಬ ಸಾಧ್ಯತೆ...?

author img

By

Published : Dec 1, 2020, 7:54 PM IST

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಗಿದ ಬಳಿಕ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುತ್ತವೆ ಎನ್ನುವ ನಿರೀಕ್ಷೆಯಿತ್ತು. ಆದರೆ ಇದೀಗ ಚುನಾವಣೆ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳ ದಿನಾಂಕ ಘೋಷಣೆ ಮಾಡುವ ಮೂಲಕ ಬೈ ಎಲೆಕ್ಷನ್ ವಿಳಂಬವಾಗುವ ಸಾಧ್ಯತೆಯಿದೆ ಎದುರಾಗಿದೆ.

Possibility of delayed muskie basavakalyana by election
ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್ ವಿಳಂಬ ಸಾಧ್ಯತೆ

ರಾಯಚೂರು: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರ ಉಪಚುನಾವಣೆ ಯಾವುದೇ ಕ್ಷಣದಲ್ಲಿ ಎದುರಾಗಬಹುದು ಎಂದು ರಾಜಕೀಯ ಪಕ್ಷಗಳೆರಡು ದಿನಾಂಕ ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ್ದು, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಳಂಬವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಗಿದ ಬಳಿಕ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುತ್ತವೆ ಎನ್ನುವ ನಿರೀಕ್ಷೆಯಿತ್ತು. ಈ ನಿರೀಕ್ಷೆಯಂತೆ ರಾಷ್ಟ್ರೀಯ ಪಕ್ಷಗಳೆರಡು ಉಪಚುನಾವಣೆ ದಿನಾಂಕ ಘೋಷಣೆ ಮುನ್ನವೇ ಅಬ್ಬರದ ಪ್ರಚಾರ ನಡೆಸುವ ಮೂಲಕ ಉಪಕದನದ ರಣಕಹಳೆ ಮೊಳಗಿಸಿದ್ದರು. ಆದರೆ ಇದೀಗ ಚುನಾವಣೆ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳ ದಿನಾಂಕ ಘೋಷಣೆ ಮಾಡುವ ಮೂಲಕ ಬೈ ಎಲೆಕ್ಷನ್ ವಿಳಂಬವಾಗುವ ಸಾಧ್ಯತೆಯಿದೆ ಎದುರಾಗಿದೆ.

ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನ ದಿನಕ್ಕೆ ರಂಗೇರುತ್ತಿತ್ತು. ಆಡಳಿತಾರೂಢ ಬಿಜೆಪಿ ಸಚಿವರು, ಮುಖಂಡರು ಸಮಾವೇಶಗಳು, ಕಾರ್ಯಕರ್ತರ ಸಭೆಯನ್ನ ಆಯೋಜಿಸುವ ಮೂಲಕ ನಿಯೋಜಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ವಿಪಕ್ಷವಾಗಿರುವ ಕಾಂಗ್ರೆಸ್ ಸಹ ಪ್ರಚಾರದಿಂದ ಹಿಂದುಳಿಯದೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪಮತಗಳಿಂದ ಪರಾಜಿತಗೊಂಡಿದ್ದ ಆರ್.ಬಸವನಗೌಡ ತುರುವಿಹಾಳರನ್ನು ಕಾಂಗ್ರೆಸ್​​ಗೆ ತರುವ ಮೂಲಕ, ಮಸ್ಕಿಯಲ್ಲಿ ಬೃಹತ್ ಸಮಾವೇಶ ನಡೆಸಿ ಪ್ರಚಾರ ನಡೆಸುತ್ತಿದ್ದರು.

ಇನ್ನೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಮತ್ತು ಹಿರಿಯ ಶಾಸಕರನ್ನ ಕಡೆಗಣಿಸಲಾಗುತ್ತಿದ್ದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಗೊಂಡರು. ಇದರ ಫಲವಾಗಿ ಬಿಜೆಪಿ ಸರ್ಕಾರಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣರಾದರು. ಆಗ ಕೆಲ ಕಾನೂನುತ್ಮಾಕ ಸಮಸ್ಯೆಗಳಿಗೆ ಸಿಲುಕಿದರು.

ಇದೀಗ ಕಾನೂನಾತ್ಮಕ ಸಮಸ್ಯೆಗಳು ದೂರವಾಗಿ ಬೈ ಎಲೆಕ್ಷನ್ ಸ್ಪರ್ಧಿಸಿ ಭರ್ಜರಿ ತಯಾರಿ ನಡೆಸಿದರು. ಒಂದು ಚುನಾವಣೆ ನಡೆದು, ಗೆಲುವು ಸಾಧಿಸಿದ್ದರೆ ಸಚಿವ ಸ್ಥಾನದ ಭಾಗ್ಯ ದೊರೆಯತ್ತಿತ್ತು. ಇದೆ ಉತ್ಸಾಹಕತೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದ ಪ್ರತಾಪ್ ಗೌಡ ಪಾಟೀಲ್ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವುದು ಮತ್ತೊಷ್ಟು ಬೈ ಎಲೆಕ್ಷನ್ ವಿಳಂಬವಾಗುವುದರಿಂದ ಮತ್ತೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವಿಧಾನಸಭಾ ಬೈ ಎಲೆಕ್ಷನ್ ಲೋಕಲ್ ಪೈಟ್ ಶುರುವಾಗುವುದು ಗ್ರಾಮಗಳಲ್ಲಿ ಗುಂಪುಗಳು ಹೆಚ್ಚಾಗಿ ಮುಂಬರುವ ಉಪಕದನಕ್ಕೆ ಪರಿಣಾಮ ಬೀರುವುದರಿಂದ ದೊಡ್ಡ ತಲೆ ನೋವಾಗಿ ಪರಿಣಾಮಿಸಿದೆ. ಅದೇನೆ ಇರಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಿಂದ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ವಿಳಂಬವಾಗಲಿದೆ ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದೆ.

ಒಂದು ವೇಳೆ ಗ್ರಾಮ ಪಂಚಾಯಿತಿ ಜತೆಯಲ್ಲಿ ವಿಧಾನಸಭಾ ಎಲೆಕ್ಷನ್ ಬಂದರೂ ಸಿದ್ದತೆ ಮಾಡಿಕೊಂಡಿದ್ದೇವೆ. ಗ್ರಾಮ ಪಂಚಾಯಿತಿ ಎಲೆಕ್ಷನ್ ಪಕ್ಷದ ಬೆಂಬಲಿಗರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಜತೆಯಲ್ಲಿ ವಿಧಾನಸಭೆ ಪ್ರಚಾರವನ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.