ETV Bharat / state

ಫಲ ನೀಡದ ಕ್ರಮ... ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಯಚೂರಿಗೆ ಮತ್ತೆ ಕೊನೆ ಸ್ಥಾನ - result

ಈ ಬಾರಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದೆ. ಈ ಬಗ್ಗೆ ಕಾರಣ ಕೊಟ್ಟ ಅಧಿಕಾರಿಗಳು ಸುಧಾರಣಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದ ಜಿಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಬಿ ಕೆ ನಂದನೂರು
author img

By

Published : May 1, 2019, 2:28 PM IST

ರಾಯಚೂರು: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ನಿನ್ನೆ ಹೊರಬಂದಿದ್ದು ಜಿಲ್ಲೆಯು ಕೊನೆಯ 33ನೇ ಸ್ಥಾನ ಗಳಿಸುವ ಮೂಲಕ ಮತ್ತೆ ಕಳಪೆ ಸಾಧನೆ ಮಾಡಿದೆ.

ಕಳೆದ ಸಾಲಿನಲ್ಲಿ ಜಿಲ್ಲೆ ಶೇ. 68 ಪಡೆದು 29ನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಹಲವು ಯೋಜನೆಗಳನ್ನು ರೂಪಿಸಿದರೂ ಕಳೆದ ಬಾರಿಗಿಂತ ಶೇ.3 ಸ್ಥಾನ ಕಡಿಮೆ ಪಡೆದುಕೊಂಡಿದೆ. ರಾಯಚೂರು ನಗರ, ಸಿಂಧನೂರು, ಮಾನ್ವಿ, ದೇವದುರ್ಗ, ಲಿಂಗಸುಗೂರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 27,765 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 16,214 ವಿದ್ಯಾರ್ಥಿಗಳು ಪಾಸ್​ ಆದರೆ 11,551 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಒಟ್ಟಾರೆ ಈ ಸಾಲಿನ ಫಲಿತಾಂಶ ನೋಡಿದರೆ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡಿದ ಜಿಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಬಿ ಕೆ ನಂದನೂರು

ಇನ್ನು ಫಲಿತಾಂಶ ಕುರಿತು ಮಾತನಾಡಿದ ಡಿಡಿಪಿಐ ಬಿ.ಕೆ.ನಂದನೂರು, ಜಿಲ್ಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ಹಾಗಾಗಿ ಈ ಸಾಲಿನ ಫಲಿತಾಂಶ ಕುಸಿದಿದೆ. ಮುಖ್ಯವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಈಗ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನಾ ಯೋಜನೆ ಹಮ್ಮಿಳ್ಳಲಾಗಿದೆ ಎಂದರು.

Intro:ರಾಜ್ಯದ್ಯಂತ ಬಿಡುಗಡೆಯಾದ ಇಂದು ಎಸ್ಎಸ್ಎಲ್ಸಿ ಫಲಿತಾಂಶ ದ ಕುರಿತು ರಾಯಚೂರು ಜಿಲ್ಲೆಗಳ ಪಟ್ಟಿಯಲ್ಲಿ ನೋಡುವುದಾದ್ರೆ ಕೊನೆಯ ಸಾಲಿನಿಂದ 2 ನೇ ಸ್ಥಾನ ಪಡೆಯುವ ಮೂಲಕ ಕಳಪೆ ಮಟ್ಟದ ಸಾಧನೆ ಮಾಡಿ ಅಪಖ್ಯಾತಿಗೆ ಗುರಿಯಾಗಿದೆ.
ಕಳೆದ ಸಾಲಿನಲ್ಲಿ ರಾಯಚೂರು ಜಿಲ್ಲೆ ಶೇ68 ಪಡೆದು 29 ನೇ ಸ್ಥಾನ ಪಡೆದಿತ್ತು. ಆದ್ರೆ ಈ ಬಾರಿ ಹಲವಾರು ಯೋಜನೆಗಳು ರುಪಿಸಿದರೂ ಕಳೆದ ಬಾರಿಗಿಂತ ಶೇ.3 ಸ್ಥಾನ ಕಡಿಮೆ ಪಡೆದುಕೊಂಡಿದ್ದು ದುರ್ದೈವದ ಸಂಗತಿ.

Body:ಜಿಲ್ಲೆಯ ರಾಯಚೂರು,ಸಿಂಧನೂರು, ಮಾನ್ವಿ ,ದೇವದುರ್ಗ,ಲಿಂಗಸೂಗೂರು ಸೇರಿ ಜಿಲ್ಲೆ ಯಲ್ಲಿ ಒಟ್ಟು 27, 765 ,ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಈ ಪೈಕಿ 16,214 ,ವಿದ್ಯಾರ್ಥಿಗಳು ಪಾಸಾಗಿದ್ದು 11,551 ವಿದ್ಯಾರ್ಥಿ ಗಳು ಫೇಲ್ ಆಗಿದ್ದಾರೆ.
ತಾಲೂಕುವಾರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ನೋಡುವುದಾದ್ರೆ ದೇವದುರ್ಗ 3801‌ಹಾಜರಾದವರು, 2558 ಉತ್ತೀರ್ಣರಾದರು, ಲಿಂಗಸೂಗೂರು 5484 ಬರೆದವರು 3502 ಪಾಸ್,, ಮಾನ್ವಿ 5055‌ಹಾಜರಾದವರು 3002 pass ರಾಯಚೂರು 8233 ಬರೆದವರು 4210 ಉತ್ತೀರ್ಣರಾದರೆ ಸಿಂಧನೂರು 5195 ಪರೀಕ್ಷೆ ಬರೆದ ಪೈಕಿ 2942 ಪಾಸಾಗಿದ್ದು 16, 214 ಉತ್ತೀರ್ಣರಾಗಿದ್ದಾರೆ.
ಈ ಸಾಲಿನ ಫಲಿತಾಂಶ ನೋಡಿದರೆ ಖಾಸಗಿ ಶಾಲೆಗಿಂತ ಸರಕಾರಿ ಶಾಲೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶ ಕುಸಿತದ ಕುರಿತು ಡಿಡಿಪಿಐ ಬಿ.
ಕೆ.ನಂದನೂರು ಅವರಿಗೆ ಕೇಳಿದರೆ ಜಿಲ್ಲೆ ಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಯಿರುವುದರಿಂದ ಫಲಿತಾಂಶ ಕುಸಿತ ಕಂಡಿದೆ.ಮುಖ್ಯವಾಗಿ ಗಣಿತ,ವಿಜ್ಞಾನ, ಇಂಗ್ಲಿಷ್ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿಯಿವೆ.ಈಗ ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗಾಗಿ ಪರಿಹಾರ ಬೋಧನೆ ಯೋಜನೆ ಹಾಗೂ ವಿದ್ಯಾರ್ಥಿ,ಶಿಕ್ಷಕರಿಗೆ ತರಬೇತಿ ಹಾಗೂ ಇತರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದಿನ ವರ್ಷದಲ್ಲಿ ಶೈಕ್ಷಣಿಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.