ETV Bharat / state

210 ಪ್ರಕರಣ ಭೇದಿಸಿದ್ದ ಶ್ವಾನ ಜೆಸ್ಸಿ ವಿಧಿವಶ.. ಪೊಲೀಸರಿಂದ ಗೌರವ ನಮನ - ರಾಯಚೂರು

ರಾಯಚೂರಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್‌ ಶ್ವಾನ ಜೆಸ್ಸಿ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದೆ.

police dog_jesse_death
ಪೊಲೀಸ್ ಶ್ವಾನ ಜೆಸ್ಸಿ
author img

By

Published : Nov 8, 2022, 12:38 PM IST

ರಾಯಚೂರು: ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ 8 ವರ್ಷ ವಯಸ್ಸಿನ ಜೆಸ್ಸಿ ಎಂಬ ಡಾಬರ್ ಮನ್ ತಳಿಯ ಪೊಲೀಸ್‌ ಶ್ವಾನ ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಮೃತಪಟ್ಟಿದೆ.

2014ರಲ್ಲಿ ಅಪರಾಧ ಪತ್ತೆ ಹಚ್ಚುವ ಟ್ರೈನಿಂಗ್ ತೆಗೆದುಕೊಂಡು 2015 ರಿಂದ ಸೇವೆಯನ್ನು ಆರಂಭಿಸಿತ್ತು. ಜೆಸ್ಸಿ ಒಟ್ಟು 210 ಅಪರಾಧ ಕೃತ್ಯಗಳನ್ನು ಪತ್ತೆ ಮಾಡಲು ನೆರವಾಗಿತ್ತು. ಅಲ್ಲದೆ 15 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಈ ಶ್ವಾನವನ್ನು ಹ್ಯಾಂಡ್ಲರ್ ಮಹೇಶ್​ ರೆಡ್ಡಿಯವರು ನೋಡಿ‌ಕೊಳ್ಳುತ್ತಿದ್ದರು.

ಶ್ವಾನಕ್ಕೆ ಪೊಲೀಸ್‌ ಇಲಾಖೆಯಿಂದ ಗೌರವ ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ:ರಾಜ್ಯದಲ್ಲಿ ಈ ವರ್ಷ ಹೆಚ್ಚು ಪೊಲೀಸರು ಸಸ್ಪೆಂಡ್: ಕಳೆದ 4 ವರ್ಷಗಳಲ್ಲೇ ಅಧಿಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.