ETV Bharat / state

ಎಲ್​​ಐಸಿಯ ಐಪಿಒ ಪ್ರಕ್ರಿಯೆ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ - ಎಲ್​ಐಸಿ

ದೇಶದ ಅಭಿವೃದ್ಧಿಗೆ ಅಪಾರ ಸಂಪನ್ಮೂಲ ಅವಶ್ಯಕತೆ ಇರುವ ಈ ಕಾಲಘಟ್ಟದಲ್ಲಿ ಆರ್ಥಿಕತೆ ಭದ್ರಪಡಿಸುವಲ್ಲಿ ಐಪಿಒ ವಿಮಾ ಕಂಪನಿಯ ಧ್ಯೇಯಕ್ಕೆ ಧಕ್ಕೆಯಾಗಲಿದ್ದು, ಕೂಡಲೇ ಕೇಂದ್ರ ಸರ್ಕಾರ ಎಲ್​​ಐಸಿ ಯ ಐಪಿಒ ಪ್ರಕ್ರಿಯೆ ಕೈಬಿಡಬೇಕು ಎಂದು ರಾಯಚೂರಿಲ್ಲಿ ವಿಮಾ ನೌಕರರ ಸಂಘ ಒತ್ತಾಯಿಸಿದೆ.

plea to do not implement Initial Public Offering in LIC
ರಾಯಚೂರು
author img

By

Published : Oct 10, 2020, 3:42 PM IST

ರಾಯಚೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಭಾರತೀಯ ಜೀವ ವಿಮಾ ನಿಗಮದಲ್ಲಿನ ತನ್ನ ಬಂಡವಾಳದ ಸ್ಪಲ್ಪ ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಭಾಗವಾಗಿ ಐಪಿಒ(Initial Public Offering) ಪ್ರಕ್ರಿಯೆ ಪ್ರಾರಂಭಿಸ ಹೊರಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಎಲ್​​​ಐಸಿ ಷೇರು ಮಾರಾಟಕ್ಕೆ ವಿರೋಧ

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಮಾ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ರವಿ, ಐ.ಪಿ.ಒ ಪ್ರಕ್ರಿಯೆ ಮೂಲಕ ಸರ್ಕಾರ ವಿಶ್ವಾಸನೀಯ ಎಲ್​ಐಸಿಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಆರೋಪಿಸಿದ್ರು. 1956ರಲ್ಲಿ ಸರ್ಕಾರದ ₹5 ಕೋಟಿ ಬಂಡವಾಳದೊಂದಿಗೆ ಆರಂಭವಾದ ಎಲ್​ಐಸಿ ಇಂದು ₹26000 ಕೋಟಿ ರೂ ಅಧಿಕ ಲಾಭದಿಂದ ₹ 32 ಲಕ್ಷ ಕೋಟಿಗೂ ಮೀರಿ ಆಸ್ತಿಯನ್ನು ಹೊಂದಿದ್ದು, 40 ಕೋಟಿಗೂ ಅಧಿಕ ಪಾಲಿಸಿದಾರರಿದ್ದಾರೆ ಎಂದರು.

1956ರ ಮುಂಚೆ 245 ಖಾಸಗಿ ಕಂಪನಿಗಳನ್ನು ಒಗ್ಗೂಡಿಸಿ ವಿಮಾ ಉದ್ಯಮವನ್ನು ರಾಷ್ಟ್ರೀಕರಣ ಮಾಡುವುದರ ಜೊತೆಗೆ ಎಲ್​ಐಸಿ ಸ್ಥಾಪನೆ ಆಯಿತು. ಅವಾಗಿನಿಂದಲೂ ಸಣ್ಣ ಉಳಿತಾಯಗಳನ್ನು ಸಂಗ್ರಹಿಸಿ ಅದನ್ನು ದೀರ್ಘಾವಧಿಯ ಬಂಡವಾಳವನ್ನಾಗಿ ಪರಿವರ್ತಿಸುವುದರ ಜೊತೆಗೆ ದೇಶದ ಆರ್ಥಿಕ ಸಾರ್ವಭೌಮತೆಗೆ ಅಮೂಲ್ಯ ಕಾಣಿಕೆ ಸಲ್ಲಿಸಿ ಪಾಲಿಸಿದಾರರಿಗೆ ಹಾಗೂ ಅವರ ಹಣಕ್ಕೆ ಭದ್ರತೆಯನ್ನು ಕಲ್ಪಿಸುವ ಸಂಸ್ಥೆಯ ಮೂಲ ಉದ್ದೇಶಕ್ಕೆ ಈ ಐ. ಪಿ. ಒ. ಪ್ರಕ್ರಿಯೆ ಧಕ್ಕೆ ತರಲಿದೆ ಎಂದು ಎಂ ರವಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.