ರಾಯಚೂರು: ನಗರದ ಮತ ಎಣಿಕೆ ಕಾರ್ಯ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದರೆ ಇತ್ತ ಮತ ಎಣಿಕೆ ಕೇಂದ್ರದ ಬಳಿ ಆರತಕ್ಷತೆಗೆ ಸಿದ್ಧಗೊಂಡಿದ್ದ ಕುಟುಂಬಸ್ಥರಿಗೆ ತಲೆ ನೋವು ಕಾಡಲಾರಂಭಿಸಿದೆ.
ನಗರದ ಎಲ್‌ವಿಡಿ ಕಾಲೇಜು ಹತ್ತಿರದ ಶ್ರೀಕೃಷ್ಣ ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆಯ ಆರತಕ್ಷತೆಗೆ ಪಂಚಾಯಿತಿ ಮುಖಂಡರಿಂದ ಹಾಗೂ ಮತ ಎಣಿಕೆ ಕೇಂದ್ರದ ಬಳಿ ನೆರೆದಿದ್ದ ಜನರಿಂದ ಅಡಚಣೆ ಉಂಟಾಗಿದೆ.
ಮತ ಎಣಿಕೆಗೆಂದು ಬಂದಿದ್ದ ಬಹುತೇಕರು ಊಟದ ಸಮಯವಾಗಿದ್ದರಿಂದ ಮದುವೆ ಆರತಕ್ಷತೆ ಕಡೆ ನುಗ್ಗಿದ್ದಾರೆ. ಇದರಿಂದ ಆರತಕ್ಷತೆಗೆ ಆಗಮಿಸಿದ್ದ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರಿಗೆ ಕಿರಿಕಿರಿ ಉಂಟಾಗಿದೆ. ಈ ಹಿನ್ನೆಲೆ ಊಟಕ್ಕೆ ಆಗಮಿಸುವವರ ಬಳಿ ಆಮಂತ್ರಣ ಪತ್ರ ವಿದೆಯೇ ಅಥವಾ ಪರಿಚಯಸ್ತರೇ ಎಂಬುದನ್ನು ತಿಳಿದು ಒಳ ಬಿಡುತ್ತಿದ್ದಾರೆ.
ಇದನ್ನೂ ಓದಿ: ರಾಯಚೂರು: ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ ಜನರು...