ETV Bharat / state

ಅನ್​ಲಾಕ್ ಬಳಿಕ ಚೇತರಿಕೆ ಹಾದಿ, ನಿಟ್ಟುಸಿರು ಬಿಟ್ಟ ಅಕ್ಕಿ ಗಿರಣಿ ಮಾಲೀಕರು.. - ಕೋವಿಡ್-19 ಮಾರ್ಗಸೂಚಿ ಅನ್ವಯ ಅನ್ ಲಾಕ್

ಲಾಕ್‌ಡೌನ್ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ಇರುವುದರಿಂದ ಅಕ್ಕಿ ಉದ್ಯಮ ಕೊಂಚ ನಷ್ಟ ಎದುರಿಸುತ್ತಿತ್ತು. ಇದೀಗ ಅನ್‌ಲಾಕ್ ಬಳಿಕ ಕಳೆದ ವಾರದಿಂದ ಅಕ್ಕಿ ಉದ್ಯಮ ಚೇತರಿಸಿಕೊಳ್ಳುತ್ತಿದೆ..

ofter-louckdown-rice-mill-bussiness-devlopment-raichur
ರಾಯಚೂರು: ಅನ್​ಲಾಕ್ ಬಳಿಕ ಚೇತರಿಕೆ ಹಾದಿ, ನಿಟ್ಟುಸಿರು ಬಿಟ್ಟ ಅಕ್ಕಿ ಗಿರಣಿ ಮಾಲೀಕರು..!
author img

By

Published : Oct 3, 2020, 7:51 PM IST

ರಾಯಚೂರು : ಕೊರೊನಾ ಭೀತಿ ನಡುವೆಯೂ ಅಕ್ಕಿಗಿರಿಣಿ ಮಾಲೀಕರು ಅಕ್ಕಿಯನ್ನ ತಯಾರಿಸಿ ಸಾಗಾಟ ಮಾಡಿದ್ದರು. ಕೊರೊನಾ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಉದ್ಯಮಕ್ಕೆ ಎಫೆಕ್ಟ್ ಆಗದಿದ್ದರೂ ತೊಂದರೆ ಅನುಭವಿಸಿದೆ. ಕೊರೊನಾ ಅನ್‌ಲಾಕ್ ಬಳಿಕ ಅಕ್ಕಿ ಉದ್ಯಮ ಚೇತರಿಕೆ ಕಾಣುತ್ತಿದೆ.

ಅನ್​ಲಾಕ್ ಬಳಿಕ ಚೇತರಿಕೆ ಹಾದಿ, ನಿಟ್ಟುಸಿರು ಬಿಟ್ಟ ಅಕ್ಕಿ ಗಿರಣಿ ಮಾಲೀಕರು..

ಭತ್ತದ ಕಣಜ ರಾಯಚೂರು ಜಿಲ್ಲೆಯ ಅಕ್ಕಿ ರಾಜ್ಯ, ಹೊರ ರಾಜ್ಯ, ದೇಶ-ವೀದೇಶಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ. ಇಂತಹ ದೊಡ್ಡ ಉದ್ಯಮಕ್ಕೆ ಕೋವಿಡ್-19 ಆರಂಭದ ದಿನಗಳಲ್ಲಿ ನಲುಗಿಸುವಂತೆ ಮಾಡಿತ್ತು. ಜತೆಗೆ ಕೆಲ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ರೈಸ್ ಮಿಲ್‌ಗಳನ್ನ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕ್ಕಿ ಕೊರತೆ ಎದುರಾಗಿಸುವ ಸ್ಥಿತಿ ನಿರ್ಮಾಣವಾಗಿತ್ತು.

ಅಕ್ಕಿ ಉದ್ಯಮ ಆರಂಭವಾದ್ರೂ ಲಾಕ್‌ಡೌನ್ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ಇರುವುದರಿಂದ ಅಕ್ಕಿ ಉದ್ಯಮ ಕೊಂಚ ನಷ್ಟ ಎದುರಿಸುತ್ತಿತ್ತು. ಇದೀಗ ಅನ್‌ಲಾಕ್ ಬಳಿಕ ಕಳೆದ ವಾರದಿಂದ ಅಕ್ಕಿ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುತ್ತಾರೆ ರಾಜ್ಯ ಅಕ್ಕಿ ಗಿರಿಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್.

ಜಿಲ್ಲೆಯಲ್ಲಿ ತುಂಗಭದ್ರಾ, ಕೃಷ್ಣ ನದಿಗಳೆರಡು ಹರಿಯುವುದರಿಂದ ನಾಲೆಗಳಿಂದ ರೈತರಿಗೆ ನೀರು ಲಭ್ಯವಾಗುತ್ತಿವೆ. ಹೀಗಾಗಿ, ಜಿಲ್ಲೆಯಲ್ಲಿ ಯಥೇಚ್ಛವಾಗಿ ಭತ್ತ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ನೂರಾರು ಅಕ್ಕಿ ಗಿರಿಣಿಗಳಿವೆ. ಆದರೆ, ಕೊರೊನಾ ಲಾಕ್‌ಡೌನ್‌ನಿಂದ ಶಾಪಿಂಗ್ ಮಾಲ್‌ಗಳು, ಅಂಗಡಿ-ಮುಗಟ್ಟುಗಳು ಬಂದ್ ಆದ ಪರಿಣಾಮ ಅಕ್ಕಿ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಕೋವಿಡ್-19 ಮಾರ್ಗಸೂಚಿ ಅನ್ವಯ ಅನ್‌ಲಾಕ್ ಆಗಿರುವುದರಿಂದ ಕಳೆದ ವಾರದಿಂದ ಚೇತರಿಕೆ ಹಾದಿ ಕಂಡು ಕೊಳ್ಳುತ್ತಿರುವುದು ಅಕ್ಕಿ ಗಿರಿಣಿ ಮಾಲೀಕರಿಗೆ ಸಮಾಧಾನ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.