ETV Bharat / state

ಕೆರೆಗೆ ನಿಗದಿತ ಅವಧಿಯಲ್ಲಿ ನೀರು ತುಂಬಿಸಿಕೊಳ್ಳದೆ ಅಧಿಕಾರಿಗಳ ನಿರ್ಲಕ್ಷ್ಯ: ಡಿಸಿಎಂ ಸವದಿ ಗರಂ

ಲಿಂಗಸುಗೂರು ತಾಲೂಕಿನ ನೀರು ಸಂಗ್ರಹಣಾ ಕೆರೆಗೆ ನಿಗದಿತ ಅವಧಿಯಲ್ಲಿ ನೀರು ತುಂಬಿಸಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ತರಾಟೆಗೆ ತೆಗೆದುಕೊಂಡರು.

Lingasaguru
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
author img

By

Published : Jun 24, 2020, 11:43 AM IST

ಲಿಂಗಸುಗೂರು: ತಾಲೂಕಿನ ಪುರಸಭೆ ವ್ಯಾಪ್ತಿ ವಾರ್ಡ್​ಗಳಿಗೆ ನೀರು ಪೂರೈಸುವ ನೀರು ಸಂಗ್ರಹಣಾ ಕೆರೆಗೆ ನಿಗದಿತ ಅವಧಿಯಲ್ಲಿ ನೀರು ತುಂಬಿಸಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಗರಂ ಆದರು.

ಮಂಗಳವಾರ ಸಂಜೆ ಕಾಳಾಪುರದ ನಾರಾಯಣಪುರ ಬಳಿ ನಿರ್ಮಿಸಿದ ನೀರು ಸಂಗ್ರಹಣಾ ಕೆರೆ ಭಾಗಶಃ ಬತ್ತಿ ಬರಿದಾಗಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು.

ನೀರು ಸಂಗ್ರಹಣಾ ಕೆರೆ ಭಾಗಶಃ ಖಾಲಿ; ಅಧಿಕಾರಿಗಳ ವಿರುದ್ಧ ಡಿಸಿಎಂ ಸವದಿ ಗರಂ

ಜುಲೈ 1 ರೊಳಗೆ ಪರ್ಯಾಯ ವ್ಯವಸ್ಥೆ ಮೂಲಕ ಈ ಮುಂಚೆ ಪೂರೈಸುವಂತೆ ಶುದ್ಧ ಸಮರ್ಪಕ ಕುಡಿಯುವ ನೀರನ್ನು ನಾಗರಿಕರಿಗೆ ನೀಡಬೇಕು. ಮಳೆಗಾಲದ ನಂತರ ತುಂಬಿದ ಹೂಳು ತೆಗೆಯಲು ಮುಂದಾಗಬೇಕು. ಭವಿಷ್ಯದಲ್ಲಿ ನಿತ್ಯ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ರು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ.ಎಸ್. ಹೊಲಗೇರಿ, ಮಾಜಿ ಶಾಸಕ ಮಾನಪ್ಪ ವಜ್ಜಲ್​, ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್​ ಚಾಮರಾಜ ಪಾಟೀಲ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.