ರಾಯಚೂರು: ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ. ಇಂತಹ ಭವ್ಯ ಸ್ವಾಗತ ಕೊಡುವ ಸಾಮರ್ಥ್ಯ ಯಾರ ಹತ್ತಿರವೂ ಇರಲಿಲ್ಲ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯನ್ನ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸಮರ್ಥಿಸಿಕೊಂಡಿದ್ದಾರೆ.
ರಾಯಚೂರು ನಗರ ಹೊರವಲಯದ ಯರಗೇರಾ ಪಿಜಿ ಸೆಂಟರ್ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಜೊತೆಯಲ್ಲಿ ಇತರ ರಾಷ್ಟಗಳೊಂದಿಗೆ ಸಂಬಂಧ ಬೆಸೆಯುವ ಕೆಲಸ ಕೂಡ ಆಗಿದೆ. ಇತರ ದೇಶಗಳೊಂದಿಗಿನ ಬಾಂಧವ್ಯ ಮುಖ್ಯ ಎಂದರು.
ಗುಜರಾತ್ನಲ್ಲಿ ಮೋದಿ ಅವರು ಮೂರು ಬಾರಿ ಸಿಎಂ ಆದ್ರೂ, ಅಲ್ಲಿನ ವಸ್ತು ಸ್ಥಿತಿ ಮುಚ್ಚಿಡಲು ಗೋಡೆ ಕಟ್ಟಿದ್ದು ಯಾಕೆ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಮೆರಿಕಕ್ಕೆ ಹೋದರೂ ಅಲ್ಲಿವೂ ಸಮಸ್ಯೆಗಳು ಇರುತ್ತೆ. ಸಮಸ್ಯೆ ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯಿಲ್ಲ. ಎಲ್ಲಾ ಸಮಸ್ಯೆ ಒಂದೇ ಬಾರಿಗೆ ಇತ್ಯರ್ಥವಾಗಲ್ಲ ಎಂದರು.
ದೇಶದ ಅಭಿವೃದ್ದಿಗೆ ಉತ್ತಮ ಕಾರ್ಯ ನಿರ್ವಹಿಸಬೇಕಾಗಿದೆ. ಪಾಕಿಸ್ತಾನವನ್ನ ಕೈಬಿಟ್ಟರೆ ಪೂರ್ಣ ಕೈತಪ್ಪುತ್ತದೆ ಅಂತ ಅಮೆರಿಕ ಜತೆಯಲ್ಲಿ ಇಟ್ಟುಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರು ಇದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷ ಬಿಟ್ಟು ಯಾರೂ ಹೊರಗಡೆ ಹೋಗಲ್ಲ. ಕಾಂಗ್ರೆಸ್ನವರು ತಮ್ಮವರನ್ನ ಮೊದಲು ಭದ್ರವಾಗಿ ಇರಿಸಿಕೊಳ್ಳಲ್ಲಿ ಎಂದರು.