ರಾಯಚೂರು: ದೇವದುರ್ಗ ಪಟ್ಟಣದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ವಹಿವಾಟು ನಡೆಸುವ ದೃಶ್ಯ ಸಾಮಾನ್ಯವಾಗಿದೆ. ತರಕಾರಿ ಮಾರಲು ಪ್ರತ್ಯೇಕ ಸ್ಥಳ ನಿಗದಿ ಮಾಡಿದ್ದರೂ ಜನ ತಮಗೆ ಬೇಕಾದಂತೆ ಮಾರಾಟ ಮಾಡುತ್ತಿದ್ದರು.
ಕೊರೊನಾ ಮಾಹಾಮಾರಿ ಹರಡುವುದನ್ನು ತಡೆಯಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಕೆಲವೆಡೆ ಲಾಕ್ಡೌನ್ ಆದೇಶ ಪಾಲಿಸಿ, ಅಗತ್ಯ ಸಮಯಗಳಲ್ಲಿ ಸೇರಬೇಕಾದಾಗ ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಕಂಡು ಬಂದರೆ ಇನ್ನೊಂದಿಷ್ಟು ಕಡೆ ಜನ ಯಾವುದಕ್ಕೂ ಕ್ಯಾರೆ ಎನ್ನದೆ ತಮಗೆ ಬೇಕಾದಂತೆ ಇದ್ದಾರೆ.