ರಾಯಚೂರು: ಒಂದೆಡೆ ಮುಸ್ಲಿಂ ಬಾಂಧವರು ಸಂಭ್ರಮ ಸಡಗರಿಂದ ಬಕ್ರೀದ್ ಹಬ್ಬವನ್ನ ಆಚರಿಸುತ್ತಿದ್ದಾರೆ. ಆದರೆ, ಕೃಷ್ಣ ಪ್ರವಾಹದ ಅಬ್ಬರದಿಂದ ರಾಯಚೂರು ಜಿಲ್ಲೆಯ ಸಂತ್ರಸ್ತರು ಬಕ್ರೀದ್ ಹಬ್ಬ ಸಂಭ್ರಮದಿಂದ ದೂರು ಉಳಿಯುವಂತಾಗಿದೆ.
ಮುಸ್ಲಿಂ ಬಾಂಧವರು ಪ್ರತಿವರ್ಷ ಬಹಳ ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡ್ತಿದ್ರು. ಆದರೆ, ಈ ಬಾರಿ ಇವರ ಹಬ್ಬಕ್ಕೆ ಕೃಷ್ಣಾ ನದಿಯಲ್ಲಿನ ಪ್ರವಾಹದಿಂದಾಗಿ ಊರು ತೊರೆದು ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಬ್ಬ ಆಚರಿಸಿದೇ ಮನೆ ಹೊಲ ಕಳೆದುಕೊಂಡ ಮಹಿಳೆಯರು ಹಬ್ಬದಂದು ಕಣ್ಣೀರು ಹಾಕಿದ ಘಟನೆ ರಾಯಚೂರಿನ ಜೇಗರಕಲ್ಲಿನಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಕಂಡು ಬಂತು. ಗುರ್ಜಾಪುರದ ಮುಸ್ಲಿಂ ಜನರು ಈಗ ನಿರಾಶ್ರಿತರಾಗಿ ಕಾಳಜಿ ಕೇಂದ್ರಕ್ಕೆ ಬಂದಿದ್ದಾರೆ, ಕಡೇ ಪಕ್ಷ ಗಂಡಸರು ಬೇರೆ ಕಡೆ ಹೋಗಿ ನಮಾಜ್ ಮಾಡಿದರೆ, ಮಹಿಳೆಯರಿಗೆ ಆ ಅವಕಾಶ ಕೂಡ ಸಿಗದೇ ಹಬ್ಬ ಆಚರಿಸಲಾಗುತ್ತಿಲ್ಲ ಎಂದು ದುಃಖಿಸಿದ್ದಾರೆ.