ETV Bharat / state

ರಾಯಚೂರು : ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ - ಸರ್ಕಾರಿ ಶಾಲೆಯಲ್ಲಿ ನ್ಯೂ ಇಯರ್​ ಪಾರ್ಟಿ

ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆಗೆ ಬಳಸುವ ಎಣ್ಣೆ, ಇನ್ನಿತರೆ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಉಳಿದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ..

new year drinks party in raichur government school
ರಾಯಚೂರು ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ
author img

By

Published : Jan 1, 2022, 12:44 PM IST

Updated : Jan 1, 2022, 1:02 PM IST

ರಾಯಚೂರು : ಸರ್ಕಾರಿ ಶಾಲೆಯೊಂದರಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್​ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ರಾತ್ರಿ ವೇಳೆ ಶಾಲೆಯ ಬೀಗ ಮುರಿದು, ಶಾಲೆಯ ವಸ್ತುಗಳನ್ನು, ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಯಾರೋ ಬಿಸಾಡಿರುವುದು ಕಂಡು ಬಂದಿದೆ.

ಶಾಲೆಯಲ್ಲೇ ಮದ್ಯದ ಖಾಲಿ ಬಾಟಲಿ ಬಿದ್ದಿರುವುದರಿಂದ ಎಣ್ಣೆ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯ ಮೊಟ್ಟೆ ಬೇಯಿಸಿಕೊಂಡು ತಿಂದು ಅಲ್ಲೇ ಬಿಸಾಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ

ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆಗೆ ಬಳಸುವ ಎಣ್ಣೆ, ಇನ್ನಿತರೆ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಉಳಿದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ನ್ಯೂ ಇಯರ್ ಪಾರ್ಟಿ - ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ 8 ಮಂದಿ ಅಂದರ್​!

ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್​ಗಳು, ಮಾಂಸದ ತುಂಡುಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಶಾಲಾ ಸಮಯದಲ್ಲಿ ಘಟನೆ ಬೆಳಕಿಗೆ ಬ‌ಂದಿದೆ. ಶಾಲೆಯ ಮುಖ್ಯೋಪಾಧ್ಯಾಯರು ವಿಷಯವನ್ನು ಮಾನ್ವಿ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Last Updated : Jan 1, 2022, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.