ETV Bharat / state

ಪ್ರವಾಹ ಭೀತಿ: ರಾಯಚೂರು ಜಿಲ್ಲೆಗೆ ಬಂದಿಳಿದ ಎನ್​​ಡಿಆರ್​​ಎಫ್ ತಂಡ - Raichur latest news

ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ 24 ಜನರ ಎನ್ ಡಿಆರ್​ಎಫ್ ತಂಡ ಬಂದಿದೆ.

NDRF team arrives in Raichur
NDRF team arrives in Raichur
author img

By

Published : Aug 12, 2020, 4:25 PM IST

ರಾಯಚೂರು: ಪ್ರವಾಹ ಭೀತಿ ಎದುರಾದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ಜಿಲ್ಲೆಯಲ್ಲಿ 24 ಜನರ ಎನ್​​ಡಿಆರ್​ಎಫ್ ತಂಡ ಬೀಡುಬಿಟ್ಟಿದೆ.

ಮಹಾರಾಷ್ಟ್ರ ಹಾಗೂ ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜಲಾಶಯಗಳು ಭರ್ತಿಯಾಗಿವೆ. ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದ್ದು, ನದಿ ಪಾತ್ರದಲ್ಲಿನ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಇನ್ನೂ ಜಿಲ್ಲಾಡಳಿತ ಸಹ ಪ್ರವಾಹ ಭೀತಿ ಎದುರಾದಾಗ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಾದ ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ. ಅಲ್ಲದೇ ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಇದೀಗ 24 ಸದಸ್ಯರ ಎನ್​ಡಿಆರ್​ಎಫ್ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

ಇಂದು ಬೆಳಿಗ್ಗೆ ನಾರಾಯಣಪುರ ಜಲಾಶಯದಿಂದ 30,108 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇಂದು ಸಂಜೆ 5 ಗಂಟೆಯವರಗೆ 1.2 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ಕ್ಕೆ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 63,400 ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಗೆ ಪ್ರವಾಹ ಭೀತಿ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.