ETV Bharat / state

ಕಾಂಗ್ರೆಸ್ ಮುಳುಗುವ ಹಡಗು, ಇದಕ್ಕೆ ಡಿಕೆಶಿಯೇ ನಾವಿಕ: ಬಿ. ಶ್ರೀರಾಮುಲು - ಸಚಿವ ಬಿ.ಶ್ರೀರಾಮುಲು ಹೇಳಿಕೆ

ಕ್ಷೇತ್ರಗಳ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತಿದ್ದೇವೆ. ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್​ ಮುಳುಗುವ ಹಡಗು ಆಗಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ನಾವಿಕ ಎಂದು ಟೀಕಿಸಿದರು.

Musky by-election Statement by Minister B. Sriramulu
ಸಚಿವ ಬಿ.ಶ್ರೀರಾಮುಲು ಹೇಳಿಕೆ
author img

By

Published : Mar 29, 2021, 1:29 PM IST

ಮಸ್ಕಿ (ರಾಯಚೂರು): ಕಾಂಗ್ರೆಸ್ ಮುಳುಗುವ ಹಡಗು ಇದ್ದ ಹಾಗೆ, ಕಾಂಗ್ರೆಸ್​ಗೆ ದೇಶದಲ್ಲಿ ಭವಿಷ್ಯವಿಲ್ಲ. ಈ ಮುಳುಗುವ ಕಾಂಗ್ರೆಸ್ ಹಡುಗಿಗೆ ಕ್ಯಾಪ್ಟನ್ ಡಿಕೆಶಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.

ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ರೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಡಿಗೆ ಸಂಬಂಧಿಸಿದ ವಿಚಾರ ತನಿಖಾ ಹಂತದಲ್ಲಿ ಇರುವುದರಿಂದ ಈ ಪ್ರಕರಣದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದರು.

ಕ್ಷೇತ್ರಗಳ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತಿದ್ದೇವೆ. ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಹೇಳಿದರು. ಬಿಜೆಪಿ ಸಂಸದರು ಗುಲಾಮರಂತೆ ಎಂದು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್ ನಾಯಕರು ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಿರಿಯರಾಗಿದ್ದು, ಈ ರೀತಿ ಮಾತನಾಡಬಾರದು' ಎಂದು ಹೇಳಿದರು.

ಓದಿ : ಸಿಎಂ ಬಿಎಸ್​ವೈ ಮೌನ ನೋಡಿದ್ರೆ ಅವರಲ್ಲೇ ಏನೋ ಹುಳುಕಿರಬಹುದು; ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.