ETV Bharat / state

ಹಳೇ ವೈಷಮ್ಯ: ರಾಡಿನಿಂದ ಹೊಡೆದು ವ್ಯಕ್ತಿಯ ಕೊಲೆ - ಹಳೆ ವೈಷಮ್ಯ : ರಾಡಿನಿಂದ ಹೊಡೆದು ವ್ಯಕ್ತಿಯ ಕೊಲೆ

ಹಳೆ ವೈಷಮ್ಯ ಹಿನ್ನಲೆಯಲ್ಲಿ ವ್ಯಕ್ತಿಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನಡೆದಿದೆ.

murder
ಕೊಲೆ
author img

By

Published : Feb 13, 2020, 3:39 PM IST

ರಾಯಚೂರು : ಹಳೇ ವೈಷಮ್ಯ ಹಿನ್ನಲೆಯಲ್ಲಿ ವ್ಯಕ್ತಿಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಹಳೆ ವೈಷಮ್ಯ : ವ್ಯಕ್ತಿ ಕೊಲೆ

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಯಂಕಪ್ಪ ಬಸಪ್ಪ(42) ಕೊಲೆಯಾದವರು. ನಿಂಗಪ್ಪ, ಹನುಮಂತ, ಮಾಹಂತಗೌಡ, ಭೀಮನಗೌಡ, ಆದನಗೌಡ ಸೇರಿದಂತೆ 6 ಜನರು ಸೇರಿಕೊಂಡು ಕಲ್ಲು ಹಾಗೂ ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

ರೈತ ಯಂಕಪ್ಪನ ಹೊಲಕ್ಕೆ ದನಗಳು ನುಗ್ಗಿರುವುದರಿಂದ ಪಕ್ಕದ ಹೊಲದವರಾದ ನಿಂಗಪ್ಪ, ಹನುಮಂತ ಹಾಗೂ ಮಾಹಂತಗೌಡ ಸೇರಿದಂತೆ 6 ಜನರು ನಡುವೆ ಕಳೆದ 8ರಂದು ಜಗಳವಾಗಿದೆ. ಜಗಳವನ್ನು ಗ್ರಾಮಸ್ಥರು ಸರಿಪಡಿಸಿದ್ದರು. ಆದರೂ ಯಂಕಪ್ಪನಿಗೆ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗುತ್ತಿದೆ.

ಇದೀಗ ಯಂಕಪ್ಪನ ಜಮೀನಿನಲ್ಲಿ 6 ಜನ ಸೇರಿಕೊಂಡು ಕಲ್ಲು ಹಾಗೂ ಕಬ್ಬಿಣದ ರಾಡ್ ತೆಗೆದುಕೊಂಡು ಕೊಲೆ ಮಾಡಿದ್ದಾರೆ ಎಂದು ಯಂಕಪ್ಪನ ಪತ್ನಿ ಶರಣಮ್ಮ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಲೆ ಪ್ರಕರಣ ದಾಖಲೆ ಹಿನ್ನಲೆಯಲ್ಲಿ ಸದ್ಯ ಪೊಲೀಸರು ಇಂದು ಕೊಲೆಯಾದ ವ್ಯಕ್ತಿಯ ಮೃತ ದೇಹವನ್ನ ರಿಮ್ಸ್​ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.