ರಾಯಚೂರು: ಸಾಕಷ್ಟು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಗರಸಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಅದು ದಿನಗೂಲಿ ನೌಕರರಿಗೆ ವೇತನ ಪಾವತಿ ಮಾಡದೇ ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗಿ ತೀವ್ರ ಆಕ್ರೋಶಕ್ಕೆ ನಗರಸಭೆ ಗುರಿಯಾಗಿದೆ.
ಶ್ರಮ ವಹಿಸುವ ಪೌರಕಾರ್ಮಿಕರಿಗೆ ಕಳೆದ 4 ತಿಂಗಳಿಂದ ಹಾಗೂ ಸ್ವಚ್ಛತೆ ಕಾರ್ಯದಲ್ಲಿ ಸಹಾಯವಾಗುವ ಡ್ರೈವರ್ಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿ ಮಾಡದ ನಗರಸಭೆ, ಇವರ ಶ್ರಮಕ್ಕೆ ತಕ್ಕ ಬೆಲೆ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದೆ.
ವೇತನ ಪಾವತಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಅಲ್ಲದೇ ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದು ಇದ್ದು ಇಲ್ಲದಂತಾಗಿದೆ ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.