ETV Bharat / state

ಕೊಳಚೆ ನೀರು, ಕಸದ ರಾಶಿಯಿಂದ ಬೆಂಬಿಡದ ಸೊಳ್ಳೆ ಕಾಟ - undefined

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ನಗರದ ಕೊಳಗೇರಿ ನಿವಾಸಿಗಳಿಗೆ ಸಂಕಟ ಎದುರಾಗಿದೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ನಿಂತ ನೀರು, ಕಸದ ರಾಶಿ, ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ.

ಬಡಾವಣೆಗಳಲ್ಲಿ ಇರುವ ಕೊಳಚೆ
author img

By

Published : Jul 23, 2019, 6:13 PM IST

ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ನಗರದ ಕೊಳಗೇರಿ ನಿವಾಸಿಗಳಿಗೆ ಸಂಕಟ ಎದುರಾಗಿದೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ನಿಂತ ನೀರು, ಕಸದ ರಾಶಿ, ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ.

ಬಡಾವಣೆಗಳಲ್ಲಿ ಇರುವ ಕೊಳಚೆ

ಅಸ್ವಚ್ಛತೆ, ಕಸದ ತಿಪ್ಪೆ, ಮಲಿನ ನೀರು ನಿಲ್ಲುವ ಕಾರಣ ಸೊಳ್ಳೆಗಳ ಪ್ರಮಾಣ ಅಧಿಕವಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕೂನ್​ ಗುನ್ಯಾ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಈ ದಿಸೆಯಲ್ಲಿ ರಾಯಚೂರು ನಗರದ ಮಡ್ಡಿಪೇಟೆ, ಹರಿಜನವಾಡ, ಸಿಯಾತಲಾಬ್ ಪ್ರದೇಶಗಳಿಗೆ 'ಈಟಿವಿ ಭಾರತ' ಭೇಟಿ ನೀಡಿ ಪರಿಶೀಲಿಸಿದಾಗ ಈ ಸತ್ಯಾಂಶ ಬಯಲಾಗಿದೆ.

ಈ ಬಡಾವಣೆಗಳಲ್ಲಿ ಎಲ್ಲೆಂದರೆಲ್ಲಿ ಕಸದ ರಾಶಿ, ಒಡೆದ ಕಾಲುವೆಗಳಿಂದ ಬರುವ ಮಲಿನ ನೀರು ರಸ್ತೆಗೆ ಸೇರುತ್ತಿದೆ. ಶೌಚಾಲಯಗಳು ಇಲ್ಲದೇ ಬಯಲು ಬಹಿರ್ದೆಸೆ ಮಾಡುತ್ತಿದ್ದಾರೆ. ಬಡಾವಣೆಗಳಲ್ಲಿ ಇರುವ ಕಸದ ರಾಶಿಗಳಿಂದ ಗಬ್ಬು ನಾರುತ್ತಿದೆ. ಸೊಳ್ಳೆಗಳ ಹಾವಳಿ ವಿಪರೀತ. ಈ ಬಡಾವಣೆಗಳು ಸಾಂಕ್ರಾಮಿಕ ರೋಗಗಳ ನಿಲ್ದಾಣಗಳಾಗಿವೆ. ಇಂತಹ ಜಾಗದಲ್ಲಿ ಹೇಗೆ ವಾಸ ಮಾಡುತ್ತಿದ್ದಾರೆ.

ಇಷ್ಟೆಲ್ಲ ಸಮಸ್ಯೆಗಳು ಕಂಡುಬಂದರೂ ಆರೋಗ್ಯ ಇಲಾಖೆ ಫಾಗಿಂಗ್ ಮಾಡಿಲ್ಲ. ಸ್ವಚ್ಛತೆಯ ಹಾಗೂ ರೋಗದ ಕುರಿತು ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಜಾಗೃತಿ ಮೂಡಿಸಿಲ್ಲ ಎಂದು ನಿವಾಸಿಗಳು ದೂರಿದರು. ಅಧಿಕಾರಿಗಳ ಬೇಜವಾಬ್ದಾರಿ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ 20 ಡೆಂಗ್ಯೂ, 5 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಆರಂಭದಲ್ಲಿಯೇ ಈ ಸ್ಥಿತಿ ಇದ್ದರೆ ಮುಂದೆ ಹೇಗೆ ಎಂಬ ಪ್ರಶ್ನೆಯಿದೆ.

Intro:ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ನಗರದ ಕೊಳಗೇರಿ ನಿವಾಸಿಗಳಿಗೆ ಸಂಕಟ ಎದುರಾಗಿದೆ.
ಮಳೆ ಬಂದರೆ ಸಂಕಟ ಯಾಕೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.
ಹೌದು, ಮಳೆಗಾಲ ಬಂದರೆ ಸಾಕು ನಗರದದ ಸ್ಲಂ ಪ್ರದೇಶಗಳಲ್ಲಿ ಕಸದ ರಾಶಿ,ಸಮರ್ಪಕವಾಗಿ ಕಾಲುವೆಗಳಿಲ್ಲದೇ ಒಡೆದ ಕಾಲುವೆಗಳಿಂದ ಮನೆ ಮುಂದೆ ನಿಲ್ಲುವ ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಗಲೀಜಿನಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.
ಮಳೆಗಾಲ ದಲ್ಲಿ ಅಸ್ವಚ್ಛತೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಕಸದ ತಿಪ್ಪೆ,ಅಲ್ಲಲ್ಲಿ ಮಲಿನ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಚ್ಚುವಿಕೆಯಿಂದ ಡೆಂಗ್ಯು,ಮಲೇರಿಯಾ, ಚಿಕನ್ ಗುನ್ಯಗಳಂತಹ ಮಾರಕ ಕಾಯಿಲೆಗಳು ಉಂಟಾಗಿ ರಾಯಚೂರಿನಲ್ಲಿ ಪ್ರತಿ ವರ್ಷ ಆಸ್ಪತ್ರೆಗಳಲ್ಲಿ ದಾಖಲಾಗಿ ಸಾವು ನೋವು ಸಂಭವಿಸುವುದು ಸಮಾನ್ಯವಾಗಿದೆ‌.
ಈ ದಿಸೆಯಲ್ಲಿ ಈಟಿವಿ ಭಾರತದಿಂದ ರಾಯಚೂರು ನಗರದ ಮಡ್ಡಿಪೇಟೆ,ಹರಿಜನವಾಡ,ಸಿಯಾತಲಾಬ್,ಎಲ್ಬಿಎಸ್ ನಗರ ಮತ್ತಿತರೆ ಸ್ಲಂ ಏರಿಯಾಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದಾಗ ಈ ಬಡಾವಣೆಗಳಲ್ಲಿ ಎಲ್ಲೆಂದರೆಲ್ಲಿ ಕಸದ ರಾಶಿ,ಒಡೆದ ಕಾಲುವೆಗಳು ಅದರಿಂದ ರಸ್ತೆಗೆ ನಿಲ್ಲುವ ಮಲಿನ ನೀರು,ಶೌಚಾಲಯಗಳಲ್ಲಿಲ್ಲದೇ ರಸ್ತೆ ಬದಿಯಲ್ಲಿಯೇ ಬಯಲು ಬಹಿರ್ದೇಸೆ ಮಾಡುವ ಮೂಲಕ ಅಸ್ವಚ್ಚತೆ ಎದ್ದು ಕಾಣುತ್ತಿದೆ.

Body:ಮಡ್ಡಿಪೇಟೆ,ಅಯ್ಯಬೌಡಿ ಗಡ್ಡ ಹಾಗೂ ಹರಿಜನವಾಡ ಬಡಾವಣೆಯಲ್ಲಿ ಯಾವ ಭಾಗದಲ್ಲಿ ನೋಡಿದರೂ ಕಸದ ರಾಶಿ, ದೊಡ್ಡ ದೊಡ್ಡ ತಿಪ್ಪೆಗಳು ನಿರ್ಮಾಣ ವಾಗಿದ್ದು ವಾಸನೆಯಿಂದ ಗಬ್ಬು ನಾರುತ್ತಿದೆ ಒಂದು ಕ್ಷಣವೂ ನಿಲ್ಲದ ಜಾಗದಲ್ಲಿ ಹೀಗೆ ವಾಸಮಾಡುತ್ತಾ ‌ಜೀವನ ಸಾಗಿಸುತ್ತಿದ್ದಾರೆ,ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿಗೆ ಮಳೆಯಾಗಿದ್ದು ಕಸದ ರಾಶಿಯಲ್ಲಿ ಮಲಿನ ನೀರು ನಿಂತು ಸೊಳ್ಳೆಗಳ ವಿಪರೀತ ಹಾವಳಿ ಉಂಟಾಗಿದ್ದು ಸಾಂಕ್ರಮಿಕ ರೋಗದ ತಾಣಗಳಾಗಿ ಮಾರ್ಪಟ್ಟಿದೆ.
ಈ ಕೋಳಚೆ ಬಡಾವಣೆಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದರೂ ಆರೋಗ್ಯ ಇಲಾಖೆ ಫಾಗಿಂಗ್ ಮಾಡಿಲ್ಲ ಸ್ವಚ್ಛತೆಯ ಹಾಗೂ ರೋಗದ ಕುರಿತು ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಜಾಗೃತಿ ಕಾರ್ಯ ಮಾಡಿಲ್ಲ ಮುಖ್ಯವಾಗಿ ನಗರಸಭೆಯಿಂದ ಇಲ್ಲಿ ಕಸ ವಿಲೇವಾರಿ ಮನಸಿಗ ಬಂದ ಹಾಗೆ ಬರುತ್ತಾರೆ ಇದರಿಂದ ಅಸ್ವಚ್ಛತೆ ತಾಂಡವ ಮಾಡುತ್ತಿದೆ ಎಂದು ಇಲ್ಲಿನ ಮಡ್ಡಿಪೇಟೆ,ಹರಿಜನವಾಡ ನಿವಾಸಿಗಳ ದೂರು.
ಜಿಲ್ಲೆಯಲ್ಲಿ ಈಗಾಗಲೆ 20 ಡೆಂಗ್ಯೂ 5 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು ಇನ್ನು ಆರಂಭದಲ್ಲಿಯೇ ಈ ಸ್ಥಿತಿಯಿದ್ದರೇ ಮುಂದೇ ಹೇಗೆ ಎಂಬ ಪ್ರಶ್ನೆಯಿದ್ದು ಇದಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಹೇಳಿಕೊಂಡಿದ್ದು ಆದ್ರೆ ಕೊಳಚೆ ಪ್ರದೇಶಗಳಲ್ಲಿ ಫಾಗಿಂಗ್ ,ಸ್ವಚ್ಛತೆ ಯ ಯಾವುದೇ ಕಾರ್ಯಕ್ರಮ ಮಾಡಿಲ್ಲ ವೆಂದು ಆರೋಪಿಸುತಿದ್ದಾರೆ ಇಲ್ಲಿನ ನಿವಾಸಿಗಳು.

ಬೈಟ್ ಅನುಕ್ರಮವಾಗಿ.
1) ಖಾತುನ್ ಬೀ.ಮಡ್ಡಿಪೇಟೆ ನಿವಾಸಿ.

2) ಅಯ್ಯಮ್ಮ ಮಡ್ಡಿಪೇಟೆ ನಿವಾಸಿ.
3) ವರಲಕ್ಷ್ಮಿ ನಿವಾಸಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.