ರಾಯಚೂರು : ಬೆಂಗಳೂರಿನಿಂದ ಲಾರಿಯಲ್ಲಿ ಬಂದ 40ಕ್ಕೂ ಹೆಚ್ಚು ಕಾರ್ಮಿಕರನ್ನ ಜಿಲ್ಲೆಯಲ್ಲಿ ತಡೆ ಹಿಡಿಯಲಾಗಿದೆ.
ನಗರದ ಬಸವೇಶ್ವರ ಸರ್ಕಲ್‌ನಲ್ಲಿ ಲಾರಿಯಲ್ಲಿ ಕಾರ್ಮಿಕರನ್ನ ಕೂಡಿಸಿಕೊಂಡು ತಾಡಪತ್ರೆ ಹಾಕಿಕೊಂಡಿರುವುದನ್ನ ಗಮನಿಸಿದ ಪೊಲೀಸರು ತಡೆ ಹಿಡಿದಿದ್ದಾರೆ. ಲಾರಿಯಲ್ಲಿದ್ದ ಕಾರ್ಮಿಕರು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯವರೆಂದು ತಿಳಿದು ಬಂದಿದೆ.
ಕಟ್ಟಡ ಕೆಲಸಕ್ಕಾಗಿ ಕೂಲಿ ಮಾಡಲು ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ತೆರಳಿದ್ದರು. ನಂತರ ಕಟ್ಟಡ ಕಾಮಗಾರಿ ಕೆಲಸ ಮುಗಿಸಿದ ಅವರು, ವಾಪಸ್ ಊರಿಗೆ ಮರಳಲು ಸಾಧ್ಯವಾಗದೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ನಾನಾ ಕಡೆ ಸಿಲುಕಿದ್ರು.
ಇದೀಗ ಲಾರಿಯಲ್ಲಿ ತಾಡಪತ್ರೆ ಹಾಕಿಕೊಂಡು ಹೋಗುವಾಗ ಜಿಲ್ಲೆಯಲ್ಲಿ ಪೊಲೀಸರು ಗಮನಿಸಿ ತಡೆದಿದ್ದರು. ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡುವ ಸಾಧ್ಯತೆಯಿದೆ. ಇನ್ನೂ ಈ ಬಗ್ಗೆ ಲಾರಿ ಮಾಲೀಕನನ್ನ ವಿಚಾರಿಸಿದಾಗ ಕರೆದುಕೊಂಡು ಹೋಗುವಂತೆ ಯಾರೋ ಹೇಳಿದ್ರು. ಆಗ ಒಬ್ಬರಿಗೆ ಸಾವಿರ ರೂ. ಎಂದು ಕರೆದುಕೊಂಡು ಬಂದಿದ್ದರು. ಇದೀಗ ಅವರನ್ನ ಎಲ್ಲಿ ಬೇಕಿದ್ರೂ ಬಿಟ್ಟು ಹೋಗುವೆ, ಇಲ್ಲವೇ ವಾಪಸ್ ಅವರ ಜಾಗಕ್ಕೆ ಮರಳಿಸುವುದಾಗಿ ಹೇಳಿದ್ದಾನೆ.
ಆದರೆ, ಲಾರಿಯಲ್ಲಿ ಬಂದ ಕಾರ್ಮಿಕರದು ಅಲ್ಲಿ ಕೆಲಸ ಮುಗಿದಿತ್ತು. ಊರಿಗೆ ವಾಪಸ್ ಬರುವುದಕ್ಕೆ ಲಾರಿ ಬಂದಿರುವುದಾಗಿ ಹೇಳುತ್ತಿದ್ದಾರೆ.