ರಾಯಚೂರು: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್ ಎಂಬಲ್ಲಿ ಇತ್ತೀಚೆಗೆ ಪ್ರತಿಕಾರಕ್ಕಾಗಿ ಮಂಗಗಳು 300ಕ್ಕೂ ಹೆಚ್ಚು ನಾಯಿಮರಿಗಳನ್ನು ಕೊಂದಿದ್ದವು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ರಾಯಚೂರಿನಲ್ಲಿ ನಡೆದಿದ್ದು, ಇಲ್ಲಿ ಮಂಗಗಳು ಕುರಿಮರಿಗಳ ದಾಳಿ ಮಾಡಿ, ಮೂರು ಮರಿಗಳನ್ನು ಕೊಂದುಹಾಕಿರುವ ಘಟನೆ ನಡೆದಿದೆ.
ತಾಲೂಕಿನ ದಿನ್ನಿ ಗ್ರಾಮದಲ್ಲಿ ಕಳೆದ ಮೂರಿ ದಿನಗಳಿಂದ ಮಂಗ 10ಕ್ಕೂ ಹೆಚ್ಚು ಕುರಿ ಮರಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರೆ, ಮೂರು ಕುರಿಗಳು ಕೊಂದುಹಾಕಿವೆ. ಕೇವಲ ಕುರಿಮರಿಗಳಲ್ಲದೇ, ನಾಯಿಗಳ ಮೇಲೂ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೋತಿಗಳು ದಿನನಿತ್ಯ ಕುರಿ ಹಾಗೂ ಕುರಿಮರಿಗಳು, ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಓಡಾಡುವ ಜನರಿಗೆ, ಮಕ್ಕಳಿಗೆ, ವೃದ್ದರಿಗೆ, ವಯೋ ವೃದ್ದರಿಗೆ ಭೀತಿ ಶುರುವಾಗಿದೆ.
ಗ್ರಾಮದಲ್ಲಿ ಈ ಆಗುತ್ತಿರುವ ತೊಂದರೆಯನ್ನ ನಿರ್ವಹಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ರಾಜಕೀಯ ನಾಯಕರಿಗೆ ಹಾಗೂ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆಯಾದರೂ, ಈ ಸಮಸ್ಯೆ ಪರಿಹಾರವಾಗಿಲ್ಲ, ಬದಲಾಗಿ ಕೋತಿ ದಾಳಿಗಳು ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೇ ಈಗ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸಕೊಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು