ETV Bharat / state

ಹಣ ಹಂಚುವುದು ಕಾಂಗ್ರೆಸ್​ನ ಪರಂಪರಾಗತ ಸಂಸ್ಕೃತಿಯ ಬಳುವಳಿ: ಡಿಕೆಶಿಗೆ ರವಿಕುಮಾರ್ ತಿರುಗೇಟು

ಮಸ್ಕಿಯ ಎರಡನೇ ವಾರ್ಡ್​ನಲ್ಲಿ ಕಾಂಗ್ರೆಸ್​ನವರೇ ಒಂದು ಮತಕ್ಕೆ ಸುಮಾರು 2000 ರೂ.ಗಳನ್ನು ಹಂಚಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

money-distribution-is-congress-culture-says-ravikumar
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್
author img

By

Published : Apr 15, 2021, 9:34 PM IST

ರಾಯಚೂರು: ಹಣ ಹಂಚುವುದು ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್​ನ ಪರಂಪರಾಗತ ಸಂಸ್ಕೃತಿಯ ಬಳುವಳಿ ಎಂದು ಮಸ್ಕಿಯಲ್ಲಿ ಬಿಜೆಪಿಯವರ ಎರಡು ಮೂಟೆ ಹಣ ಸಿಕ್ಕಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆರೋಪಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ನವರೇ ಒಂದು ಮತಕ್ಕೆ ಸುಮಾರು 2000 ರೂ.ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ದಾಖಲೆಯೆಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಮಸ್ಕಿಯ ಎರಡನೇ ವಾರ್ಡ್​ನಲ್ಲಿ ಹಣ ಹಂಚಿದ್ದಾರೆ ಎನ್ನಲಾದ ವಿಡಿಯೋವನ್ನು ತೋರಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬಿಜೆಪಿಯವರ ಮೇಲೆ ಆರೋಪ ಮಾಡುತ್ತಿರುವ ಡಿಕೆಶಿಯವರೇ ಸ್ವತಃ ಹಣವನ್ನು ಹಂಚುವ ಉದ್ದೇಶದಿಂದ ಮಸ್ಕಿಗೆ ಬಂದಿದ್ದಾರೆ. ಅವರು ಹಣವನ್ನು ಹಂಚುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಯವರಿಗೆ ಹಣ ಹಂಚುವ ಅಗತ್ಯ ಇಲ್ಲ. ಇಲ್ಲಿ ನಾವು ಸುಮಾರು 20,000 ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದರು.

ಓದಿ: ಮತ್ತೊಮ್ಮೆ ಲಾಕ್​​​​ಡೌನ್ ಮಾಡಲು ಸಾಧ್ಯವಿಲ್ಲ, ಇಷ್ಟವೂ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.