ETV Bharat / state

'ನನ್ನನ್ನು ಮದುವೆಯಾಗದಿದ್ರೆ ದೇವದಾಸಿ ಮಾಡ್ತೀನಿ': ಬಾವನ ವಿರುದ್ಧ ಯುವತಿಯ ದೂರು - ರಾಯಚೂರು ಯುವತಿಗೆ ಕಿರುಕುಳ

ಅಕ್ಕನ ಗಂಡ ಮದುವೆಯಾಗುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿರುವುದಾಗಿ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.

molestation of Young woman
ಯುವತಿಗೆ ಕಿರುಕುಳ
author img

By

Published : Jun 16, 2021, 10:09 AM IST

ರಾಯಚೂರು: 'ನನ್ನನು ಮದುವೆಯಾಗದಿದ್ದರೆ ದೇವದಾಸಿಯನ್ನಾಗಿ ಮಾಡುತ್ತೇನೆ' ಎಂದು ಬಾವ (ಅಕ್ಕನ ಗಂಡ) ಬೆದರಿಕೆ ಹಾಕಿರುವುದಾಗಿ ಜಿಲ್ಲೆಯ ದೇವದುರ್ಗ ತಾಲೂಕು ಚಿಂಚೋಡಿ ಗ್ರಾಮದ‌ ಯುವತಿ ಆರೋಪಿಸಿದ್ದಾಳೆ. ಅಕ್ಕನ ಗಂಡ ಶಾಂತಪ್ಪ ಎಂಬಾತ ಮದುವೆಯಾಗುವಂತೆ ಪೀಡಿಸುತ್ತಿದ್ದು, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಹೇಳಿದ್ದಾಳೆ.

ಶಾಂತಪ್ಪ ಈಗಾಗಲೇ ಯುವತಿಯ ಅಕ್ಕನ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈಗ ನನನ್ನು ಮದುವೆಯಾಗು ಎಂದು ಯುವತಿಗೆ ಹಿಂಸೆ ನೀಡುತ್ತಿದ್ದಾನಂತೆ. ಈತನ ಕಾಟ ತಾಳಲಾರದೆ ಯುವತಿ ಯಾದಗಿರಿ ಜಿಲ್ಲೆ ಸುರಪುರದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿಯನ್ನ ರಕ್ಷಿಸಿದ್ದಾರೆ.

ನೊಂದ ಯುವತಿ

ಪ್ರಸ್ತುತ ಯುವತಿ ರಾಯಚೂರಿನ ಮಹಿಳಾ ಸ್ವಾಂತನ ಕೇಂದ್ರದಲ್ಲಿ ಇದ್ದಾಳೆ. ತನ್ನ ಬಾವನ ವಿರುದ್ದ ಈಕೆ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಲಿಂಗಸೂಗೂರು ಡಿವೈಎಸ್ಪಿ ಎಸ್. ಎಸ್ ಹುಲ್ಲೂರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.

ಯುವತಿಗೆ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ಕುಟುಂಬಸ್ಥರು ಆಕೆಗೆ ಹೊಡೆದು ಆ ವ್ಯಕ್ತಿಯ ಮನೆಗೆ ಬಿಟ್ಟು ಬಂದಿದ್ದರು. ಆದರೆ, ಆತನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವುದರಿಂದ ಯುವತಿಯನ್ನು ಮದುವೆಯಾಗಲು ನಿರಾಕರಿಸಿ, ಆತನ ಮಾವನ ಮೂಲಕ ಯುವತಿಯನ್ನು ಯಾದಗಿರಿಗೆ ಕಳುಹಿಸಿದ್ದ. ಅಲ್ಲಿಂದ ಆಕೆ ಸಬಂಧಿಕರ ಮನೆ ಸೇರಿಕೊಂಡಿದ್ದಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.