ರಾಯಚೂರು: ಪಕ್ಷದ ಜವಾಬ್ದಾರಿ ಚೆನ್ನಾಗಿ ನಿಭಾಯಿಸುತ್ತಿರುವುದರಿಂದ ಬಿ.ವೈ.ವಿಜಯೇಂದ್ರಗೆ ಉಪ ಚುನಾವಣಾ ಜವಾಬ್ದಾರಿ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿಯಾಗಿರುವ ಯತ್ನಾಳ್ ಅಂತಹವರಿಗೆ ನೇತೃತ್ವ ನೀಡಬೇಕಾ. ಉಪಚುನಾವಣೆಗಳಲ್ಲಿ ಬಿ.ವೈ.ವಿಜಯೇಂದ್ರ ಪಕ್ಷದ ಗೆಲುವಿನಲ್ಲಿ ಶ್ರಮಿಸಿದ್ದಾರೆ. ಯತ್ನಾಳ್ ಈಗಾಗಲೇ ಅನೇಕ ಸಲ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಆದರೆ ಒಮ್ಮೆಯೂ ಯಾವ ಸ್ಪೋಟವೂ ಆಗಿಲ್ಲ, ಅವರ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ ಎಂದರು.
ಈಶ್ವರಪ್ಪನವರನ್ನು ಯತ್ನಾಳ ರೀತಿ ನೋಡುವುದು ಸರಿಯಲ್ಲ
ಸಿಎಂ ಹಾಗೂ ಈಶ್ವರಪ್ಪ ಅವರ ನಡುವಿನ ಭಿನ್ನಾಭಿಪ್ರಾಯ ಶೀಘ್ರ ಪರಿಹಾರವಾಗಲಿದೆ. ಈಶ್ವರಪ್ಪ ಅವರು ಪಕ್ಷ ವಿರೋಧಿ ಮಾತಾಡಿಲ್ಲ. ಈಶ್ವರಪ್ಪ ಹಾಗೂ ಯತ್ನಾಳ್ ಅವರನ್ನು ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಹೇಳಿದರು.
ಯತ್ನಾಳ್ ವಿರುದ್ಧ ಕ್ರಮ.. ರಮೇಶ್ ಜಾರಕಿಹೊಳಿ ಎಲ್ಲಿದ್ದಾರೋ ಗೊತ್ತಿಲ್ಲ
ಮಸ್ಕಿ ಉಪಚುನಾವಣೆ ನಂತರ ವರಿಷ್ಠರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಅನ್ನೋ ಮಾಹಿತಿಯಿಲ್ಲ. ಚುನಾವಣೆ ಪ್ರಚಾರ ಕಾರ್ಯದಲ್ಲಿರುವುದರಿಂದ ಆ ಬಗ್ಗೆ ಮಾಹಿತಿ ಪಡೆದಿಲ್ಲ ಎಂದರು.