ETV Bharat / state

ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕ ನೀರು ಪೂರೈಕೆ: ಶಾಸಕ ಹೂಲಗೇರಿ

ಕೃಷ್ಣಾ ಭಾಗ್ಯ ಜಲನಿಗಮ ಮತ್ತು ತಾಲೂಕು, ಜಿಲ್ಲಾಡಳಿತದ ಸಹಯೋಗದಲ್ಲಿ ರಾಂಪೂರ ಏತ ನೀರಾವರಿ ಯೋಜನೆ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕೆರೆಗೆ ನೀರು ಭರ್ತಿ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಅಗುತ್ತಿದ್ದು, ಈ ಮುಂಚೆಯಂತೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಡಿ.ಎಸ್. ಹೂಲಗೇರಿ ಹೇಳಿದರು.

ಶಾಸಕ ಹೂಲಗೇರಿ
ಶಾಸಕ ಹೂಲಗೇರಿ
author img

By

Published : Jul 5, 2020, 5:01 PM IST

ಲಿಂಗಸುಗೂರು (ರಾಯಚೂರು): ಲಿಂಗಸುಗೂರು ಪುರಸಭೆ ವಾರ್ಡ್​ಗಳಿಗೆ ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಡಿ.ಎಸ್. ಹೂಲಗೇರಿ ಹೇಳಿದರು.

ಸಮರ್ಪಕ ನೀರು ಪೂರೈಕೆ ಭರವಸೆ

ಇಂದು ಕುಡಿಯುವ ನೀರು ಸಂಗ್ರಹಣ ಕೆರೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯಿಂದ ನೀರು ಸಂಗ್ರಹಣೆ ಸಮಸ್ಯೆಯಾಗಿದೆ. ವಾರಕ್ಕೊಮ್ಮೆ ನೀರು ಬಿಡುವಂಥ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕೃಷ್ಣಾ ಭಾಗ್ಯ ಜಲನಿಗಮ ಮತ್ತು ತಾಲೂಕು, ಜಿಲ್ಲಾಡಳಿತದ ಸಹಯೋಗದಲ್ಲಿ ರಾಂಪೂರ ಏತ ನೀರಾವರಿ ಯೋಜನೆ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕೆರೆಗೆ ನೀರು ಭರ್ತಿ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಅಗುತ್ತಿದ್ದು, ಈ ಮುಂಚೆಯಂತೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನೀಕರಣ ಕಾಮಗಾರಿ ಸರಿಯಾಗಿ ನಡೆದಿದೆ. ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಪರಿಶೀಲಿಸಿ ಪುನಃ ಕೆಲಸ ಮಾಡಿಸಲಾಗುವುದು. ಬಸಿ ನೀರು, ಲ್ಯಾಟರಲ್ ಹಾನಿಯಿಂದ ಮನೆಗೆ ನೀರು ನುಗ್ಗಿದ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.