ರಾಯಚೂರು: ಶಾಸಕ ಡಿ. ಎಸ್. ಹೂಲಗೇರಿ, ರಾಯಚೂರು ಜಿಲ್ಲೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾಗಿರುವ ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೆರಿಸಿದರು.
ಕೆಬಿಜೆಎನ್ಎಲ್ ಇಲಾಖೆ ವತಿಯಿಂದ ಜೂಲಗುಡ್ಡ ಕ್ರಾಸ್ ನಿಂದ ಖೈರವಾಡಗಿವರೆಗೆ ವಾಯಾ ಜೂಲಗುಡ್ಡ ಹನಮಗುಡ್ಡ ರಸ್ತೆ ಅಭಿವೃದ್ದಿಪಡಿಸುವ ಕಾಮಗಾರಿ ಮತ್ತು ಎಸ್ಸಿ ಕಾಲೋನಿ ಸಿಸಿ ರಸ್ತೆ ಕಾಮಗಾರಿ ಮೊತ್ತ ರೂ. 1050.00 ಲಕ್ಷ. 2018-19ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ ಇ ಯೋಜನೆಯಡಿ ರೋಡಲಬಂಡಾ ಸಜ್ಜಲಗುಡ್ಡ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ ಮೊತ್ತ ರೂ 250.00 ಲಕ್ಷ. ಆನೆಹೊಸೂರು ಗ್ರಾಮದಲ್ಲಿ ಪ್ರಗತಿ ಕಾಲೋನಿ ಮತ್ತು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿ ಪಡಿಸುವ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಮೊತ್ತ ರೂ. 25ಲಕ್ಷಗಳಿಗೆ ಭುಮಿ ಪೂಜೆ ನೆರವೇರಿಸಿದರು.