ETV Bharat / state

ರಾಯಚೂರಿಗೆ ಸಚಿವ ಶ್ರೀರಾಮುಲು ಭೇಟಿ: ನೆರೆ ಪರಿಹಾರ ಕುರಿತು ಅಧಿಕಾರಿಗಳ ಜೊತೆ ಸಭೆ - ಶಾಸಕ ರಾಜಾ ವೆಂಕಟಪ್ಪ ನಾಯಕ

ರಾಯಚೂರು ಜಿಲ್ಲೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಪ್ರವಾಹದಿಂದ ಉಂಟಾದ ನಷ್ಟ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ನೆರೆ ಪರಿಹಾರ ಕುರಿತು ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಸಭೆ
author img

By

Published : Aug 22, 2019, 4:42 AM IST

ರಾಯಚೂರು: ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶ್ರೀರಾಮುಲು ನೆರೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರವಾಹದಿಂದ ಉಂಟಾದ ಬೆಳೆ, ಅಸ್ತಿ-ಪಾಸ್ತಿ ನಾಶ, ಸಂತ್ರಸ್ತರಿಗೆ ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು.

ನೆರೆ ಪರಿಹಾರ ಕುರಿತು ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಸಭೆ

ಸಭೆಯಲ್ಲಿ ಪ್ರಸ್ತುತ ಪ್ರವಾಹದ ನಷ್ಟ, ಸಾವು ನೋವಿನ ಕುರಿತ ಚರ್ಚೆ ನಡೆಯಿತು. ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಂಎಲ್​ಸಿ ಬಸರಾಜ ಪಾಟೀಲ್ ಇಟಗಿ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು 2009ರಲ್ಲಿ‌ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಆಗ ಮನೆ ಮಠ ಕಳೆದು ಕೊಂಡವರನ್ನು ಸ್ಥಳಾಂತರಿಸಲಾಗಿತ್ತು ಆದ್ರೆ ಸ್ಥಳಾಂತರಗೊಂಡ ಸಂತ್ರಸ್ತರಿಗೆ ಕಳಪೆ ಮನೆಗಳ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ಅಲ್ಲಿ‌ ವಾಸವಾಗಿಲ್ಲ ಎಂದು ಶ್ರೀರಾಮುಲು ಅವರ ಗಮನಕ್ಕೆ ತಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶರತ್ ಬಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ ಕೂಡ, ಕಳಪೆ ಮನೆ ಹಾಗೂ ತರಾತುರಿಯಲ್ಲಿ ಮನೆ ನಿರ್ಮಾಣ ಮಾಡಿದ ಕಾರಣ ವಾಸವಾಗುತ್ತಿಲ್ಲ ಎಂದಾಗ ಸಚಿವ ಶ್ರೀರಾಮುಲು ಅವರು ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಡುಗಡೆಯಾದ ಅನುದಾನದಲ್ಲಿ 2009ರಲ್ಲಿ ಸ್ಥಳಾಂತರಗೊಂಡ ಗ್ರಾಮಗಳಿಗೆ ಭಾಗಶಃ ನಾಶವೆಂದು ಘೋಷಿಸಿ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶರತ್ ಬಿ ಅವರು, ಈ ವರ್ಷದ ಪ್ರವಾಹಕ್ಕೆ ಖರ್ಚು ಮಾಡುವುದು ತುರ್ತು ಇದೆ. 2009ರ ಸಂದರ್ಭದ ಸಂತ್ರಸ್ತರಿಗೆ, ಸ್ಥಳಾಂತರಗೊಂಡ ಗ್ರಾಮಗಳಿಗೆ ಖರ್ಚು ಮಾಡಿದರೆ ಸಮಸ್ಯೆಯಾಗಬಹುದು ಎಂದು ಇತರೆ ಕಾರಣ ನೀಡಿದರು. ಜೊತೆಗೆ 2009 ರಲ್ಲಿ ಪ್ರವಾಹ ಸಂತ್ರಸ್ತರಿಗೆ ಬಿಡುಗಡೆಯಾದ ಅನುದಾನ ಖರ್ಚಾಗದೇ ಸರಕಾರಕ್ಕೆ ವಾಪಸ್ ಆಗಿದ್ದ ವಿಷಯದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂತು.

ಸಭೆಯಲ್ಲೇ ಮಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ 2009ರ ವಿಷಯ ತಿಳಿಸಿದಾಗ ವಾಪಸ್ ಅದ ಅನುದಾನದ ಕುರಿತು ಪ್ರಪೋಸಲ್ ಕಳಿಸಿದರೆ ಪುನಃ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ನಿರ್ಮಿಸಿದ 11,386 ಮನೆಗಳ ಪೈಕಿ ಕೇವಲ 1,294 ಮನೆಗಳಲ್ಲಿ ಮಾತ್ರ ಜನ ವಾಸವಾಗಿದ್ದು 7 ಸಾವಿರಕ್ಕೂ ಹೆಚ್ಚು ಮನೆಗಳು ಖಾಲಿಯಿವೆ 765 ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂದು ಬಸರಾಜ ಪಾಟೀಲ್ ಇಟಗಿ, ಶಿವರಾಜ ಪಾಟೀಲ್ ಸಭೆಯ ಗಮನಕ್ಕೆ ತಂದರು.

ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳ ಪೈಕಿ ಸ್ಥಳಾಂತರಗೊಂಡು ಮೂಲಭೂತ ಸೌಕರ್ಯದ ಕೊರತೆಯಿಂದ ಡಿ.ರಾಂಪೂರ ಗ್ರಾಮದ ಸಂತ್ರಸ್ತರು ಮನೆ ತೊರೆದಿರುವ ಬಗ್ಗೆ ಈ ಟಿವಿ ಭಾರತ ಆ.19 ರಂದು "ರಾಯಚೂರು: ಮೂಲಸೌಕರ್ಯಗಳ ಕೊರತೆ ,ಮನೆ ಬಿಟ್ಟು ತೆರಳುತ್ತಿರುವ ಸಂತ್ರಸ್ತರು" ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು ಎಂಬುವುದು ಗಮನಾರ್ಹ.

ಇದೇ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ಪ್ರಕೃತಿ ವಿಕೋಪದಿಂದ ಹಾಳಾದ ಹಳ್ಳಿಗಳಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಸಿದ್ದವಾಗಿದೆ. ನಷ್ಟದ ಕುರಿತ ಅನುದಾನ ಗೊಂದಲ ನಿವಾರಿಸಲು ರಾಜ್ಯ ಸರಕಾರಕ್ಕೆ ತಿಳಿಸಲಾಗುವುದು. ಜೊತೆಗೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಲಾಗುವುದು ಯಾವುದೇ ಕಾರಣಕ್ಕೂ ಸಂತ್ರಸ್ತರು ಎದೆಗುಂದುವ ಅವಶ್ಯಕತೆಯಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂತ್ರಸ್ತರ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಎಂದರು.

Intro:ರಾಯಚೂರಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ನೆರೆ ಪ್ರವಾಹದ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಪ್ರಸ್ತುತ ಪ್ರವಾಹದಿಂದ ನಡೆದ ಬೆಳೆ,ಅಸ್ತಪಾಸ್ತಿ ನಾಶ,ಸಂತ್ರಸ್ಥರ ಪರಿಹಾರದ ಕುರಿತ ಚರ್ಚೆ ನಡೆಯಿತು.
ಸಭೆಯಲ್ಲಿ ಪ್ರಸ್ತುತ ಪ್ರವಾಹದ ನಷ್ಟ,ಸಾವು ನೋವಿನ ಕುರಿತ ಚರ್ಚೆ ನಡೆಯುತ್ತಿರುವ ಮಧ್ಯೆ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ,ಎಮ್ಎಲ್ಸಿ ಬಸರಾಜ ಪಾಟೀಲ್ ಇಟಗಿ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು 2009 ರಲ್ಲಿ‌ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಮನೆ ಮಠ ಕಳೆದು ಕೊಂಡವರಿಗೆ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು ಆದ್ರೆ ಸ್ಥಳಾಂತರಗೊಂಡ ಸಂತ್ರಸ್ಥರಿಗೆ ಕಳಪೆ ಮನೆ ಗಳ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ಅಲ್ಲಿ‌ ವಾಸವಾಗಿಲ್ಲ ಎಂದು ಶ್ರೀರಾಮುಲು ಅವರ ಗಮನಕ್ಕೆ ತಂದರು.

Body:ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶರತ್ ಬಿ.ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ ಅವರು ಪ್ರತಿಕ್ರಿಯಿಸಿ ಅಲ್ಲಿ ಕಳಪೆ ಮನೆ ಹಾಗೂ ತರಾತುರಿಯಲ್ಲಿ ಮನೆ ನಿರ್ಮಾಣ ಮಾಡಿದ ಕಾರಣ ವಾಸವಾಗುತ್ತಿಲ್ಲ ಎಂದಾಗ ಸಚಿವ ಶ್ರೀರಾಮುಲು ಅವರು ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಡುಗಡೆಯಾದ ಅನುದಾನ ದಲ್ಲಿ 2009 ರ ಸ್ತಳಾಂತರ ಗ್ರಾಮಗಳಿಗೆ ಬಾಗಶಃ ನಾಶವೆಂದು ಘೋಷಿಸಿ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಸೂಚಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ಶರತ್ ಬಿ ಅವರು ಈ ವರ್ಷದ ಪ್ರವಾಹಕ್ಕೆ ಖರ್ಚು ಮಾಡುವುದು ತುರ್ತು ಇದೆ 2009ರ ಸಂದರ್ಭದ ಸಂತ್ರಸ್ಥರಿಗೆ,ಸ್ಥಳಾಂತರಗೊಂಡ ಗ್ರಾಮಗಳಿಗೆ ಖರ್ಚು ಮಾಡಿದರೆ ಸಮಸ್ಯೆಯಾಗಬಹುದು ಎಂದು ಇತರೆ ಕಾರಣ ನೀಡಿದರು.
ಜೊತೆಗೆ 2009 ರಲ್ಲಿ ಪ್ರವಾಹ ಸಂತ್ರಸ್ಥರಿಗೆ ಬಿಡುಗಡೆಯಾದ ಅನುದಾನ ಖರ್ಚಾಗದೇ ಸರಕಾರಕ್ಕೆ ವಾಪಸ್ ಆಗಿದ್ದ ಕುರಿತ ವಿಷಯದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂತು ಈ ಸಂದರ್ಭದಲ್ಲಿ ಶ್ರೀರಾಮುಲು ಅವರು ಸರಕಾರದ ಮಖ್ಯ ಕಾರ್ಯದರ್ಶಿಗಳಿಗೆ ವೇದಿಕೆಯಲ್ಲಿ ಯೇ ಫೋನ್ ಮಾಡಿ ವಿಷಯ ತಿಳಿಸಿದಾಗ ಮುಖ್ಯ ಕಾರ್ಯದರ್ಶಿ ಗಳಿಂದ 2009 ರಲ್ಲಿನ‌ ವಿಷಯ ತಿಳಿಸಿದಾಗ ನಂತರ ಅಂದು ವಾಪಸ್ ಅದ ಅನುದಾನದ ಕುರಿತು ಪ್ರಪೋಸಲ್ ಕಳಿಸಿದರೆ ಪುನಃ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಮುಂಚೆ 2009 ರಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ತಾಲೂಕಿನ ಅರಶಣಗಿ, ಡಿ.ರಾಂಪೂರು,ಗುರ್ಜಾಪುರ, ಮಾನ್ವಿಯ ಚೀಕಲಪರ್ವಿ,ಯಡಿಹಾಳ ಸೇರಿದಂತೆ ಹಲವಾರು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿತ್ತು.
ಜಿಲ್ಲೆಯಲ್ಲಿ ನಿರ್ಮಿಸಿದ 11,386 ಮನೆಗಳ ಪೈಕಿ ಕೇವಲ 1,294 ಕುಟುಂಬಗಳು ವಾಸವಾಗಿದ್ದು 7 ಸಾವಿರಕ್ಕೂ ಹೆಚ್ಚು ಮನೆಗಳು ಖಾಲಿಯಿವೆ 765 ಹಕ್ಕು ಪತ್ರ ನೀಡಿಲ್ಲ ಎಂದು ಬಸರಾಜ ಪಾಟೀಲ್ ಇಟಗಿ, ಶಿವರಾಜ ಪಾಟೀಲ್ ಸಭೆಯ ಗಮನಕ್ಕೆ ತಂದರು.
ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳ ಪೈಕಿ ಸ್ಥಳಾಂತರಗೊಂಡು ಮೂಲಭೂತ ಸೌಕರ್ಯದ ಕೊರತೆಯಿಂದ ಡಿ.ರಾಂಪೂರ ಗ್ರಾಮದ ಸಂತ್ರಸ್ಥರು ಮನೆ ತೊರೆದಿರುವ ಬಗ್ಗೆ ಆ.19 ರಂದು "ರಾಯಚೂರು: ಮೂಲಸೌಕರ್ಯಗಳ ಕೊರತೆ,ಮನೆ ಬಿಟ್ಟು ತೆರಳುತ್ತಿರುವ ಸಂತ್ರಸ್ಥರು" ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು ಎಂಬುವುದು ಗಮನಾರ್ಹ.
ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಶರತ್ ಬಿ.ಅವರು ಇತ್ತೀಚಿಗೆ ಉಂಟಾದ ಪ್ರವಾಹದಿಂದಾಗಿ ಎಷ್ಟೇ ಗ್ರಾಮಗಳು,ಎಷ್ಟು ಸಂಖ್ಯೆಯಲ್ಲಿ ಸಂತ್ರಸ್ಥರಿದ್ದಾರೆ ಹಾಗೂ ,ಪರಿಹಾರೋಪಾಯ ಹಾಗೂ ಜಿಲ್ಲಾಡಳಿತ ಎದುರಿಸಿದ ಕ್ರಮದ ಕುರಿತು ಸಚಿವರ ಗಮನಕ್ಕೆ ತಂದರು.
ಅಲ್ಲದೇ ಪ್ರವಾಹದಿಂದ ರೈತರಿಗೆ ಆದ ಹಾನಿಯ ಬಗ್ಗೆ,ಸುಟ್ಟ ಟಿಸಿಗಳ ದುರಸ್ತಿ,ಪಂಪ್ ಸೆಟ್ ಗಳ ವಿತರಣೆಯ ಕುರಿತು ಚರ್ಚೆ ನಡೆಯಿತು.

ನಂತರ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಹಾಳಾದ ಹಳ್ಳಿಗಳಿಗೆ ಹಾನಿಯಾದಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರ ಸಿದ್ದವಾಗಿದೆ,ನಷ್ಟದ ಕುರಿತ ಅನುದಾನ ಗೊಂದಲ ನಿವಾರಿಸಲು ರಾಜ್ಯ ಸರಕಾರಕ್ಕೆ ತಿಳುಸಲಾಗುವುದು ಜೊತೆಗೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಲಾಗುವುದು ಯಾವುದೇ ಕಾರಣಕ್ಕೂ ಸಂತ್ರಸ್ಥರು ಎದೆಗೊಂದುವ ಅವಶ್ಯಕತೆಯಿಲ್ಲ ಕೇಂದ್ರ ಹಾಗೂ ರಾಜ್ಯ ಸರಕಾರ ಸಂತ್ರಸ್ತರ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.