ETV Bharat / state

ರಾಯಚೂರು - ಕಾಂಗ್ರೆಸ್​ನದ್ದು ದಿಕ್ಕು ದೆಸೆಯಿಲ್ಲದ ಯಾತ್ರೆ: ಶ್ರೀರಾಮುಲು ವಾಗ್ದಾಳಿ - ಹೆಚ್​​ ವಿಶ್ವನಾಥ್​​ ಹೇಳಿಕೆ

ಕಾಂಗ್ರೆಸ್​ ಬಸ್​ ಯಾತ್ರೆ - ದಿಕ್ಕು ದೆಸೆಯಿಲ್ಲದ ಯಾತ್ರೆ ಎಂದು ಟೀಕಿಸಿದ ಸಚಿವ ಶ್ರೀರಾಮುಲು - ಸಿದ್ದು, ಡಿಕೆಶಿ ವಿರುದ್ಧ ವಾಗ್ದಾಳಿ

Etv minister-shriramulu-spoke-against-congress-bus-yathra
ಕಾಂಗ್ರೆಸ್​ನದ್ದು ದಿಕ್ಕು ದೆಸೆಯಿಲ್ಲದೆ ಯಾತ್ರೆ : ಶ್ರೀರಾಮುಲು ವಾಗ್ದಾಳಿ
author img

By

Published : Jan 11, 2023, 8:33 PM IST

Updated : Jan 11, 2023, 9:03 PM IST

ರಾಯಚೂರು - ಕಾಂಗ್ರೆಸ್​ನದ್ದು ದಿಕ್ಕು ದೆಸೆಯಿಲ್ಲದ ಯಾತ್ರೆ: ಶ್ರೀರಾಮುಲು ವಾಗ್ದಾಳಿ

ರಾಯಚೂರು : ಕಾಂಗ್ರೆಸ್ ಆರಂಭಿಸಿರುವ ಬಸ್ ಯಾತ್ರೆ ದಿಕ್ಕು ದೆಸೆಯಿಲ್ಲದ ಯಾತ್ರೆಯಾಗಿದೆ ಎಂದು ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿರುವ‌ ಮೂರು ದಿನದ ಕೃಷಿ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಜನ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡುತ್ತಾರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿಕೊಂಡು ಬಸ್ ಯಾತ್ರೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಇಬ್ಬರ ಬಗ್ಗೆಯೂ ಜನರಿಗೆ ತಿಳಿದಿದೆ. ಇದೊಂದು ಸುಳ್ಳಿನ ಯಾತ್ರೆ ಎಂದು ಟೀಕಿಸಿದರು. ಈ ಸುಳ್ಳಿನ ಶೂರರ ಮಾತುಗಳನ್ನು ಜನರು ಕೇಳಲ್ಲ. ಕಾಂಗ್ರೆಸ್ ನಾಯಕರು ಯಾವುದೇ ಯಾತ್ರೆ ಮಾಡಿದರೂ, ರಾಜ್ಯದಲ್ಲಿ ಜನರು ಕಾಂಗ್ರೆಸ್​ ಅನ್ನು ತಿರಸ್ಕಾರ ಮಾಡುತ್ತಾರೆ. ರಾಜ್ಯದಲ್ಲಿ, ದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದು, ಒಳ್ಳೆಯ ಕೆಲಸ ಮಾಡುತ್ತಿದೆ. 2023ರಲ್ಲಿ ಪುನಃ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್​. ವಿಶ್ವನಾಥ್​​ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್​ ನಮ್ಮ ಪಕ್ಷದ ಹಿರಿಯ ನಾಯಕರು. ವಿಶ್ವನಾಥ್​ ಅವರು ಮೊದಲ ಬಾರಿಗೆ ರಾಜೀನಾಮೆ ‌ನೀಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಚುನಾವಣೆ ಸೋತ ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ಅವರಿಗೆ ಮನಸ್ಸಿಗೆ ಬೇಸರವಾಗಿದ್ದರೆ, ನಮ್ಮ ಸಿಎಂಗೆ ಮತ್ತು ಪಕ್ಷದ ಮುಖಂಡರಿಗೆ ಮಾತುಕತೆ ನಡೆಸಲು ಹೇಳಿದ್ದೇನೆ. ವಿಶ್ವನಾಥ್​ ಅವರ ಮನವೊಲಿಸುವ ಕೆಲಸ ಮಾಡುವುದಾಗಿ ಹೇಳಿದರು. ಸಾರಿಗೆ ಇಲಾಖೆಯಲ್ಲಿ ಹೊಸ‌‌ ಬಸ್‌ಗಳನ್ನು ಖರೀದಿಸುವುದಕ್ಕೆ‌ ತೀರ್ಮಾನಿಸಿಸಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಶುರುವಾಗಿದೆ ಎಂದರು‌.

ಕಾಂಗ್ರೆಸ್​ ಪಕ್ಷ ಸೇರುತ್ತೇನೆ ಎಂದ ಹೆಚ್​ ವಿಶ್ವನಾಥ್​ : ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ ಇಂದು ತಾವು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ರಕ್ತನೇ ಕಾಂಗ್ರೆಸ್. ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ. ಇನ್ನು ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದರು.

ರಾಜಕಾರಣ ಒಂದು ಕುಟುಂಬ ಇದ್ದ ಹಾಗೆ. ಅಣ್ಣ ತಮ್ಮ ಮುನಿಸಿಕೊಂಡು ಹೊರ ಹೋಗುತ್ತಾರೆ. ಮತ್ತೆ ಮರಳಿ ಬರುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಬೆಳೆದವರು. ಸಿದ್ದರಾಮಯ್ಯಗೆ ಕೋಲಾರದಲ್ಲಿ ನಿಲ್ಲಬೇಕು ಅನಿಸಿದೆ. ಅದಕ್ಕೆ ಅಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಅವರು ಅಲ್ಲಿ ಸ್ಪರ್ಧೆಗೆ ಮಾಡುವುದಕ್ಕೆ ಮುಂದಾಗಿದ್ದಾರೆ. ಮತದಾರರ ತೀರ್ಮಾನ ಅಂತಿಮವಾಗಿರುತ್ತದೆ ಎಂದರು.

ನಾನು ಬಿಜೆಪಿ ಎಂಎಲ್​​ಸಿ ಅಲ್ಲ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಕ್ತಿಯನ್ನು ಯಾರೂ ಅಲ್ಲಗೆಳೆಯಲು ಆಗುವುದಿಲ್ಲ. ಅವರು ಇಲ್ಲದೇ ರಾಜ್ಯದಲ್ಲಿ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಎಸ್​ವೈ ಅವರನ್ನು ಸಮರ್ಥನೆ ಮಾಡಿಕೊಂಡರು. ನಾನು ಈಗ ಸ್ವತಂತ್ರ. ನಾನು ಸಾಹಿತ್ಯ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ. ಬಿಜೆಪಿಯ ಎಂಎಲ್ ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ನಂತರದಲ್ಲಿ ನನ್ನನ್ನು ನಾಮನಿರ್ದೇಶನ ಮಾಡಲಾಗಿದೆ. ಆದರೆ, ಈ ವಿಷಯ ಬಹಳ ಜನರಿಗೆ ಗೊತ್ತಿಲ್ಲ. ಹೀಗಾಗಿ ನಾನು ಯಾವ ಪಕ್ಷದಲ್ಲಿಲ್ಲ ಸ್ವತಂತ್ರ ವ್ಯಕ್ತಿ ಎಂದು ಹೇಳಿದರು.

ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ : ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೆ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ಆರೋಪಿಸಿದರು. ಇನ್ನು ಬಾಂಬೆ ಬಾಯ್ಸ್ ನಲ್ಲಿ ಏನಿದೆ ಎನ್ನುವುದು ಪುಸ್ತಕ ಬಿಡುಗಡೆಯಾದ ಮೇಲೆ ಗೊತ್ತಾಗುತ್ತದೆ. ಸ್ಯಾಂಟ್ರೋ ರವಿ ಯಾರೂ ಎನ್ನುವುದು ನನಗೆ ಗೊತ್ತಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಸುಮ್ನೆ ಗಾಳಿಪಟ ಬಿಟ್ಟಿದ್ದಾರೆ.

ಅವರಿಗೆ ಅವನು ಚೆನ್ನಾಗಿ ಗೊತ್ತು. ಕುಮಾರಸ್ವಾಮಿ ರಾಜಕೀಯಕ್ಕೂ ಮೊದಲು ಸಿನಿಮಾ ರಂಗದಲ್ಲಿದ್ದವರು. ಎರಡು ಬಾರಿ ಸಿಎಂ ಆಗಿದ್ದವರು. ಅನುಭವಿಗಳು ಹಾರಿಕೆ ವಿಚಾರಗಳನ್ನು ಮಾತನಾಡುವುದು ಶೋಭೆ ತರುವುದಿಲ್ಲ. ಪ್ರತ್ಯಕ್ಷದರ್ಶಿ ಸಾಕ್ಷಿಗಳಿದ್ದರೆ ಇಂದೇ ತೋರಿಸಲಿ. ಕುಮಾರಸ್ವಾಮಿ ಹಿಟ್ ಅಂಡ ರನ್ ಬಿಡಬೇಕು ಎಂದರು.

ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆ : ನಾನು ಸಿದ್ದರಾಮಯ್ಯ ಪರ ಪ್ರಚಾರ ಮಾಡುವೆ. ಸಿದ್ದರಾಮಯ್ಯ ನಾನು ವೈರಿಗಳು ಅಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರುವುದು ನಿಜ. ರಾಜಕಾರಣದಲ್ಲಿ ವಿರೋಧ ಬೇರೆ. ವೈರಿ ಬೇರೆ. ಅದನ್ನು ಒಂದು ಮಾಡಿ ಬಿಡುತ್ತಿದ್ದೇವೆ. ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಹೋದ್ರೆ ತಪ್ಪೇನು?, ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ ಕೆಲಸ ಮಾಡಿದವರು ಎಂದು ಹೇಳಿದರು. 2023ರ ಚುನಾವಣೆ ಸ್ಪರ್ಧೆ ವಿಚಾರಕ್ಕೆ ನಾನು ಯಾವುದೇ ತೀರ್ಮಾನ ಮಾಡಿಲ್ಲ. 2023ರ ಚುನಾವಣೆ ಏನೇನು ಆಗುತ್ತೋ ಏನೋ ಗೊತ್ತಿಲ್ಲ. ಎಲ್ಲಾ ರಿಯಲ್ ಎಸ್ಟೇಟ್ ನವರು, ದುಡ್ಡು ಇದ್ದ ಗಿರಾಕಿಗಳು ನುಗ್ಗುತ್ತಿದ್ದಾರೆ. ಇದರಲ್ಲಿ ನಾವು ಎಲ್ಲಿ ನೋಡೋಣ ಎಂದರು.

ಇದನ್ನೂ ಓದಿ : ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್​ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್​ ನಾಯಕರ ವಾಗ್ದಾಳಿ

Last Updated : Jan 11, 2023, 9:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.