ETV Bharat / state

ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ನಮ್ಮ ಕರುನಾಡಿನ ಹೆಮ್ಮೆ: ಸುಬುಧೇಂದ್ರ ಶ್ರೀ - ಬಾಲರಾಮನ ಮೂರ್ತಿ

ರಾಮನ ನಾಡು ರಾಯಚೂರು ಜಿಲ್ಲೆ, ಅನೆಗುಂದಿ ಆಗಿರಬಹುದೂ, ಸುತ್ತಲಿನ ಪ್ರದೇಶದಲ್ಲಿ ಶ್ರೀರಾಮ ಓಡಾಡಿದ ಸ್ಥಳ. ಇವತ್ತಿನ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಪ್ರಾಂತ್ಯದ ಜಿಲ್ಲೆಗಳು ಶ್ರೀರಾಮನ ಪಾದ ಧೂಳಿನಿಂದ ಪುನೀತವಾಗಿರುವಂತಹವು ಎಂದು ಮಂತ್ರಾಲಯ ರಾಘವೇಂದ್ರ ಮಠದ ಶ್ರೀಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

Shri Subudhendra Teertha of Mantralaya spoke to the media.
ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Jan 2, 2024, 5:49 PM IST

ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಾಧ್ಯಮದವರ ಜೊತೆ ಮಾತನಾಡಿದರು.

ರಾಯಚೂರು: ಶ್ರೀ ರಾಮನ ತತ್ತ್ವಾದರ್ಶಗಳು ಇಡೀ ‌ಮನುಕುಲಕ್ಕೆ ಪ್ರಿಯವಾಗಿವೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಎಲ್ಲರಿಗೂ ಆದರ್ಶಪ್ರಾಯ ಮತ್ತು ಅನುಕರಣೀಯ. ರಾಮದೀದಾ ವರ್ತಿತಾದಂ, ನಾ ರಾವಣಾದಿ ವರ್ತಿತಂ” ನೀನು ಹೇಗೆ ಇರಬೇಕು ಅಂತ ಹೇಳುವಾಗ ಎಲ್ಲರೂ ರಾಮನಂತೆ ಇರು ಎನ್ನುತ್ತಾರೆ. ಅದರಂತೆ ಪ್ರತಿಯೊಬ್ಬರು ಆದರ್ಶ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ರಾಮನ ನಾಡು ರಾಯಚೂರು ಜಿಲ್ಲೆ: ಇದು ಮುಖ್ಯವಾಗಿ ರಾಮನ ನಾಡು ರಾಯಚೂರು ಜಿಲ್ಲೆ, ಅವಿಭಾಜ್ಯ ಜಿಲ್ಲೆ ಏನಿತ್ತೂ, ಅನೆಗುಂದಿ ಆಗಿರಬಹುದೂ, ಸುತ್ತ ಮುತ್ತಲಿನ ಪ್ರದೇಶದಲ್ಲಿ ಶ್ರೀರಾಮ ಓಡಾಡಿದ ಸ್ಥಳ. ಇವತ್ತಿನ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಪ್ರಾಂತ್ಯದ ಜಿಲ್ಲೆಗಳು ಶ್ರೀರಾಮನ ಪಾದ ಧೂಳಿನಿಂದ ಪುನೀತವಾಗಿರುವಂತಹವು ಎಂದು ತಿಳಿಸಿದರು.

ದಕ್ಷಿಣೋತ್ತರಗಳ ಅನುಸಂಧಾನ: ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ಎರಡೂ ನಮ್ಮ ಕನ್ನಡಿಗರು ಎನ್ನುವುದು ಹೆಮ್ಮೆ, ಎಲ್ಲ ಕನ್ನಡಿಗರು ಅಭಿನಂದಿಸಬೇಕು. ರಾಮ ಉತ್ತರದಿಂದ ದಕ್ಷಿಣಕ್ಕೆ ಬಂದು ಉತ್ತರಕ್ಕೆ ಕಡೆಗೆ ಹೋದನು. ಆದ್ದರಿಂದ ದಕ್ಷಿಣದಿಂದ ಉತ್ತರಕ್ಕೆ ಬಾಲರಾಮನ ವಿಗ್ರಹ, ಶಿಲ್ಪಿಗಳು ಅಲ್ಲಿಗೆ ಹೋಗುತ್ತಿರುವುದು, ದಕ್ಷಿಣೋತ್ತರಗಳ ಅನುಸಂಧಾನಕ್ಕೆ ಒಂದು ಮುಖ್ಯ ಸನ್ನಿವೇಶ ಎಂದು ತಿಳಿಸಿದರು.

ಶ್ರೀರಾಮನ ಮಂದಿರ ಹಲವು ಶತಮಾನದ ಬೇಡಿಕೆ:ಹಲವು ಶತಮಾನದಿಂದ ಬೇಡಿಕೆ ಆಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಈಗ ಈಡೇರುತ್ತಿದೆ. ಆಯೋಧ್ಯೆಯಲ್ಲಿ ಜನವರಿ 22 ರಂದು ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ.ಅಂದು ಸಮಸ್ತ ಭಾರತೀಯರ ಹಬ್ಬದ ದಿನ.

ಅಂದಿನಿಂದ ಭಕ್ತರ ದರ್ಶನಕ್ಕೆ ರಾಮ ಮಂದಿರ ತೆರೆಯಲಿದೆ. ಉದ್ಘಾಟನೆ ಬಳಿಕ ಬರೋಬ್ಬರಿ 48 ದಿನ ಕಾಲ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದೇ ಹೊತ್ತಲ್ಲಿ ಭಾರತ ದೇಶ ಮಾತ್ರವಲ್ಲ, ವಿಶ್ವಾದ್ಯಂತ ಮನೆ ಮನೆಗಳಲ್ಲಿ ಪ್ರತಿಯೊಬ್ಬರು ದೀಪ ಬೆಳಗಿ ರಾಮ ನಾಮ ಸ್ಮರಣೆ ಮಾಡಲಿದ್ದಾರೆ.

ರಾಮ ಒಂದು ಜನಾಂಗಕ್ಕೆ ಸೀಮಿತವಾದವನು ಅಲ್ಲ. ರಾಮ ಆದರ್ಶ ಪ್ರಭು, ಆದರ್ಶ ಪ್ರಜೆ, ಆದರ್ಶ ಪುತ್ರ, ಆದರ್ಶ ಪಿತಾ, ಆದರ್ಶ ಪತಿ, ಶ್ರೀ ರಾಮನ ತತ್ತ್ವಾದರ್ಶಗಳು ಇಡೀ ‌ಮನುಕುಲಕ್ಕೆ ಆದರ್ಶವಾದವು ಎಂದು ತಿಳಿಸಿದರು.

ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ: ಅಂದು ಗ್ರಾಮದ ಪಟ್ಟಣದಲ್ಲಿ, ನಗರದಲ್ಲಿ, ದೇವತಾ ಸನ್ನಿಧಿಯಲ್ಲಿ ಶಿವನ ದೇವಾಲಯದಲ್ಲಿ, ಶ್ರೀಆಂಜನೇಯ ಸ್ವಾಮಿ, ಗಣಪತಿ ದೇಗುಲದಲ್ಲಿ ಅಥವಾ ದೇವಾಲಯಗಳಲ್ಲಿ ಪ್ರತಿಯೊಬ್ಬರು ಪ್ರಾರ್ಥನೆ ಮಾಡಿ, ಆಧ್ಯಾತ್ಮಿಕ ದಿವ್ಯ ಶಕ್ತಿಯನ್ನು ಎಲ್ಲ ಕಡೆ ಕಳುಹಿಸಬೇಕು. ಆಯೋಧ್ಯೆ ನೂತನ ಶ್ರೀರಾಮ ಮಂದಿರದಲ್ಲಿ ಎಲ್ಲ ಶಕ್ತಿ ಒಗ್ಗೂಡಿಸಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಇಡೀ ದೇಶ ಮತ್ತು ವಿಶ್ವಕ್ಕೆ ಅಂದು ವಿಶಿಷ್ಟ, ಶಕ್ತಿದಾಯಕ ದಿನವಾಗಲಿದೆ ಎಂದರು.

ಇದನ್ನೂಓದಿ: ಈ ದೇವಸ್ಥಾನದಲ್ಲಿ ಅರ್ಚಕರೇ ದೇವರು! ನಾಟಿ ವೈದ್ಯನ ನೆನಪಿಗೆ ಗುಡಿ ಕಟ್ಟಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.