ರಾಯಚೂರು: ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ಯುವಕರನ್ನು ವಂಚಿಸಿರುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಾಲತವಾಡ ಮೂಲದ ಮಂಜುನಾಥ ರೆಡ್ಡಿ ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ಕುಪ್ಪಿಗುಡ್ಡ ಗ್ರಾಮದ ಅಂಬರೇಶ್, ಕರಡಕಲ್ ಗ್ರಾಮದ ಮಹೇಶ್ ಎನ್ನುವವರಿಂದ 3 ಲಕ್ಷ ರೂ. ಪಡೆದು ವಂಚನೆ ಎಸಗಿದ್ದಾನೆ. ಈ ಕುರಿತು ಮುದಗಲ್ ಠಾಣೆ ವಂಚನೆ ಪ್ರಕರಣ ದಾಖಲಾಗಿದೆ.
ಇದೇ ಮಾದರಿಯಲ್ಲಿ ಮಂಗಳೂರು ಜಿಲ್ಲೆಯ ಸೂರತ್ ಕಲ್ನಲ್ಲಿಯು ವಂಚಿಸಿದ್ದು, ಪ್ರಕರಣ ದಾಖಲಾಗಿತ್ತು. ಸೂರತ್ ಕಲ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇದೇ ರೀತಿಯಲ್ಲಿ ಹಲವು ಕಡೆ ವಂಚನೆ ಮಾಡಿರುವ ಸಾಧ್ಯತೆಯಿದ್ದು, ವಂಚನೆಗೊಳಾದವರು ಸಂಬಂಧಿಸಿದ ಠಾಣೆ ವ್ಯಾಪ್ತಿಗೆ ದೂರು ದಾಖಲಿಸುವಂತೆ ಪೊಲೀಸ್ ಕೋರಿದ್ದಾರೆ.