ETV Bharat / state

ರಾಯಚೂರಲ್ಲಿ ಹರಿದ ನೆತ್ತರು.. ಹಾಡಹಗಲೇ‌ ಗುತ್ತಿಗೆದಾರನ ಬರ್ಬರ ಕೊಲೆ - ರಾಯಚೂರಲ್ಲಿ ವ್ಯಕ್ತಿಯ ಹತ್ಯೆ

ರಾಯಚೂರಲ್ಲಿ ಗುತ್ತಿಗೆದಾರನ ಬರ್ಬರ ಕೊಲೆ- ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬೈಕ್​ನಲ್ಲಿ ತೆರಳಲು ಮುಂದಾದಾಗ ಮಚ್ಚಿನಿಂದ ಹಲ್ಲೆ- ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ

ಹಾಡಹಗಲೇ‌ ಗುತ್ತಿಗೆದಾರನ ಬರ್ಬರ ಹತ್ಯೆ
ಹಾಡಹಗಲೇ‌ ಗುತ್ತಿಗೆದಾರನ ಬರ್ಬರ ಹತ್ಯೆ
author img

By

Published : Jul 21, 2022, 7:21 PM IST

Updated : Jul 21, 2022, 8:23 PM IST

ರಾಯಚೂರು: ಹಾಡಹಗಲೇ‌ ಗುತ್ತಿಗೆದಾರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಪ್ರಕರಣ ತಾಲೂಕು ಕ್ಷೇತ್ರಾಶಿಕ್ಷಣಾಧಿಕಾರಿ ಕಚೇರಿ‌ ಬಳಿ ಟೆಲಿಫೋನ್ ಎಕ್ಸೆಚೇಂಜ್ ಕಚೇರಿ ಎದುರು ನಡೆದಿದೆ. ಮಚ್ಚು ಹಾಗೂ ಕಲ್ಲಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಮಹೆಬೂಬ ಅಲಿ(35) ಎಂದು‌ ಗುರುತಿಸಲಾಗಿದೆ.

ಮೆಹಬೂಬ್​ ಅಲಿ ಗುತ್ತಿಗೆದಾರನಾಗಿದ್ದರು. ಸಂಜೆ ಶಾಲೆ ಬಿಡುವ ಸಮಯಕ್ಕೆ ಮಕ್ಕಳನ್ನು ಕರೆದುಕೊಂಡು ಬೈಕ್​ನಲ್ಲಿ ತೆರಳಲು ಮುಂದಾದಾಗ ಹಿಂದಿನಿಂದ ಬಂದ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸದರ್ ಬಜಾರ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಹಾಡಹಗಲೇ‌ ಗುತ್ತಿಗೆದಾರನ ಬರ್ಬರ ಕೊಲೆ

ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಮೃತನ ಸಂಬಂಧಿಕರು ಆಸ್ಪತ್ರೆಯ ಬಳಿ ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನೂ ಓದಿ: ಬೆಂಗಳೂರು ED ಕಚೇರಿ ಮುಂದೆ 'ಕೈ' ಪ್ರತಿಭಟನೆ.. ಎರಡು ಕಾರುಗಳಿಗೆ ಬೆಂಕಿ, 11 ಜನ ಪೊಲೀಸ್​ ವಶಕ್ಕೆ

Last Updated : Jul 21, 2022, 8:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.