ರಾಯಚೂರು: ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆ ನಗರದಲ್ಲಿ ಮದ್ಯದಂಗಡಿಗಳ ಎದುರು ಎಣ್ಣೆಪ್ರಿಯರು ಮಾರುದ್ದ ಕ್ಯೂ ನಿಂತಿದ್ದಾರೆ.
ಕಠಿಣ ಲಾಕ್‌ಡೌನ್ ಹಿನ್ನೆಲೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಇಂದು ಅಗತ್ಯ ವಸ್ತುಗಳ ಜತೆಯಲ್ಲಿ ಮದ್ಯದ ಅಂಗಡಿಗಳನ್ನ ಓಪನ್ ಮಾಡಿಸುವ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಸುದ್ದಿ ತಿಳಿದ ಎಣ್ಣೆಪ್ರಿಯರು ಎದ್ನೋ ಬಿದ್ನೋ ಅಂತಾ ಓಡಿ ಬಂದು ಬಾರ್ಗಳ ಮುಂದೆ ಎಣ್ಣೆಗಾಗಿ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನ ಮರೆತು ಮದ್ಯದ ಬಾಟಲ್ ಖರೀದಿಸುವಲ್ಲಿ ಮಗ್ನರಾಗಿದ್ದಾರೆ.
ಇಂದು ಮಧ್ಯಾಹ್ನದವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿದ್ದು, ಪುನಃ ಅಂಗಡಿಗಳು ಬಂದ್ ಆಗುವುದರಿಂದ ಸ್ಟಾಕ್ ಮಾಡಿಕೊಳ್ಳಲು ಹೆಚ್ಚು ಬಾಟಲ್ಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಲಾಕ್ಡೌನ್ನಿಂದ ಮದ್ಯ ಮಾರಾಟವಾಗದೇ ಇದ್ದ ಬಾರ್ಗಳಲ್ಲಿ ಇಂದು ಭರ್ಜರಿ ಮದ್ಯ ಮಾರಾಟ ನಡೆಯಿತು.