ರಾಯಚೂರು : ಹಸಿರು ವಲಯವೆಂದು ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನ ಸಡಲಿಕೆ ಮಾಡುವ ಮೂಲಕ ಕೆಲ ವ್ಯಾಪಾರ-ವಹಿವಾಟುಗಳಿಗೆ ಅನುವು ಮಾಡಿಕೊಟ್ಟಿದೆ.
ನಿಯಮ ಸಡಿಲಿಕೆ ಪರಿಣಾಮ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಳವಾಗಿದೆ. ಕಿರಾಣಿ, ಬಟ್ಟೆ ಅಂಗಡಿಗಳು, ಹೋಟೆಲ್ ಪಾರ್ಸಲ್‌ಗಳಿಗೆ, ಗ್ರಾಮೀಣ ಪ್ರದೇಶದ ಕೆಲ ಕೈಗಾರಿಕೆಗಳ ವಹಿವಾಟಿಗೆ ನಿಮಯಗಳ ಪ್ರಕಾರ ಅನುವು ಮಾಡಿಕೊಡಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಕೂಲಿ ಕೆಲಸಕ್ಕೆಂದು ಬೇರೆ ಕಡೆ ಹೋಗಿ ಸಿಲುಕಿದ್ದ ಜಿಲ್ಲೆಯ ಜನರನ್ನು ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸುಮಾರು 80ಕ್ಕೂ ಹೆಚ್ಚು ಜನರನ್ನ ಕರೆತಲಾಗಿದೆ. ಆರೋಗ್ಯ ತಪಾಸಣೆ ನಡೆಸುವ ಮೂಲಕ ಅವರ ಗ್ರಾಮಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆ.