ETV Bharat / state

ರಾಯಚೂರಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ.. ಕ್ರಮಕ್ಕೆ ಸ್ಥಳೀಯರ ಒತ್ತಾಯ..

author img

By

Published : Jan 23, 2021, 6:53 PM IST

ತಾಲೂಕಾಸ್ಪತ್ರೆ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅವಧಿ ಮುಗಿದಿದೆ. ಪರವಾನಿಗೆ ರಿನಿವಲ್ ಬಳಿಕ ಗಣಿಗಾರಿಕೆ ಮುಂದುವರೆಸಬೇಕು. ಆದರೆ ಯಾವ ನಿಯಮವನ್ನೂ ಪಾಲಿಸದೆ ನಿರಂತರವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

illegal-stone-mining-in-raichur
ರಾಯಚೂರಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ

ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸದ್ದು ಮಾಡುತ್ತಿದೆ. ಸರ್ಕಾರದ ಆದೇಶದಂತೆ ಗಣಿಗಾರಿಕೆ ನಡೆಸಬೇಕು, ಆದರೆ ಎಗ್ಗಿಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ರಾಯಚೂರಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ

ಓದಿ: ಹುಣಸೋಡು ಗ್ರಾಮದ ಕ್ವಾರಿಗೆ ಸಿಎಂ ಯಡಿಯೂರಪ್ಪ ಭೇಟಿ, ಪರಿಶೀಲನೆ

ಜಿಲ್ಲೆಯ ಸರ್ಕಾರಿ ತಾಲೂಕಾಸ್ಪತ್ರೆಯ ಪಕ್ಕದಲ್ಲಿಯೇ ಕಲ್ಲುಗಣಿಗಾರಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪಟ್ಟಣದ ಸರ್ಕಾರಿ ತಾಲೂಕಾಸ್ಪತ್ರೆಯ ಪಕ್ಕದಲ್ಲಿಯೇ ಕೃಷ್ಣಾರೆಡ್ಡಿ ಎಂಬ ವ್ಯಕ್ತಿಗೆ ಸೇರಿದ ಕಲ್ಲು ಗಣಿಗಾರಿಕೆಯಲ್ಲಿ ಪ್ರತಿ ನಿತ್ಯ ಸುಮಾರು 1 ಗಂಟೆಯ ಸಮಯಕ್ಕೆ ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಲಾಗುತ್ತದೆ.

ಈ ಬ್ಲಾಸ್ಟಿಂಗ್​ನಿಂದ ತಾಲೂಕಾಸ್ಪತ್ರೆ, ಸೋನಿಯಾಗಾಂಧಿ ನಗರ, ಜನತಾ ಕಾಲೋನಿ, ಗಂಗಾಧರ ನಾಯಕ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ನಿತ್ಯ ಚಿಕಿತ್ಸೆಗೆ ಬರುವ ರೋಗಿಗಳು ಸಹ ಕಲ್ಲಿನ ಕ್ವಾರಿಯ ಬ್ಲಾಸ್ಟಿಂಗ್​ನಿಂದ ನಲುಗಿದ್ದು, ಈ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸುತ್ತಮುತ್ತಲಿನ ಸಾವಿರಾರು ಜನರು ಜೀವ ಭಯದ ಮಧ್ಯೆ ವಾಸಿಸುವ ದುಸ್ಥಿತಿ ಒದಗಿದೆ ಎನ್ನುತ್ತಾರೆ ಸ್ಥಳೀಯರು.

ತಾಲೂಕಾಸ್ಪತ್ರೆ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅವಧಿ ಮುಗಿದಿದೆ. ಪರವಾನಿಗೆ ರಿನಿವಲ್ ಬಳಿಕ ಗಣಿಗಾರಿಕೆ ಮುಂದುವರೆಸಬೇಕು. ಆದರೆ ಯಾವ ನಿಯಮವನ್ನೂ ಪಾಲಿಸದೆ ನಿರಂತರವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದರು.

ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಜಿಲ್ಲೆಯ 49 ಕಟ್ಟಡ ಕಲ್ಲು ಕ್ವಾರಿಗಳಿದ್ದು, ಸಕ್ರಮವಾಗಿ ನಡೆಯುತ್ತಿವೆ. ನಿಯಮದಂತೆ ಸ್ಪೋಟ ನಡೆಸಲಾಗುತ್ತಿದೆ. ಮಾನವಿಯ ಕೃಷ್ಣಾ ರೆಡ್ಡಿ ಎನ್ನುವರಿಗೆ ಸೇರಿದ ಕ್ವಾರಿ ಸುಮಾರು 700 ಮೀಟರ್ ದೂರದಲ್ಲಿದ್ದು, ನಿಯಮದಂತೆ ಸ್ಪೋಟ ಮಾಡುತ್ತಿದ್ದಾರೆ. ಈ ಗಣಿಯ ಅವಧಿ ಮುಗಿದ ಹಿನ್ನೆಲೆ, 2020 ಮಾರ್ಚ್ 20ಕ್ಕೆ ಬಂದ್ ಮಾಡಿಸಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಆದರೆ ಇತ್ತ ಕೃಷ್ಣಾ ರೆಡ್ಡಿ ಮಾಲಿಕತ್ವದ ಕ್ವಾರಿ ಬಂದ್ ಆಗಿಲ್ಲ.

ಒಟ್ಟಿನಲ್ಲಿ, ಸಾರ್ವಜನಿಕರು ನಿತ್ಯ ಓಡಾಡುವ ಸ್ಥಳದಲ್ಲೇ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದು ಜನರಿಗೆ ಆತಂಕ ಮೂಡಿಸುತ್ತಿದೆ. ಅಲ್ಲದೇ ಅವಧಿ ಮುಗಿದರೂ ಸಹ ನಿರಂತರವಾಗಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಸಂಬಂಧಿಸಿದ ಇಲಾಖೆ ಮಾತ್ರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.