ರಾಯಚೂರು: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದ ಹಿರಿಯ ಅಧಿಕಾರಿ ಹಾಗೂ ಕುಟುಂಬಸ್ಥರ ವಿರುದ್ದ ಪ್ರಕರಣ ದಾಖಲಾಗಿದೆ.
ವೈಟಿಪಿಎಸ್ ಸೂಪರಿಡೆಂಟ್ ಇಂಜನಿಯರ್ ಎಸ್.ಆರ್ ಕಬಾಡೆ ಮತ್ತು ಪತ್ನಿ, ಆರ್ಟಿಪಿಎಸ್ ಅಕೌಂಟ್ ಆಫೀಸರ್ ಅನುಪಮ, ಮಗ ಪ್ರೀತಮ್ ಹಾಗು ಮಗನ ಸ್ನೇಹಿತೆ ಡಾ.ಚಿನ್ಮಯಿ ವಿರುದ್ದ ಮೊಕದ್ದಮೆ ದಾಖಲಾಗಿದೆ. ಡಾ.ಚಿನ್ಮಯಿ ಜರ್ಮನಿಯಿಂದ ಶಕ್ತಿನಗರಕ್ಕೆ ಆಗಮಿಸಿದ್ದರು. ಹೀಗಾಗಿ ಮಾರ್ಚ್ 14 ರಿಂದ 29 ರವರೆಗೆ ಎಸ್.ಆರ್ ಕಬಾಡೆ ಮನೆಯಲ್ಲಿ ಅವರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಹೀಗಿದ್ದರೂ,ನಿಯಮ ಉಲ್ಲಂಘಿಸಿ ಎಲ್ಲರೂ ಕುಟುಂಬ ಸಮೇತ ಹೊರಗಡೆ ಸುತ್ತಾಡುತ್ತಿದ್ದರು.
![Litigation against YTPS officer and family members for Violating Lockdown](https://etvbharatimages.akamaized.net/etvbharat/prod-images/6643684_962_6643684_1585899759575.png)
ಹೀಗಾಗಿ ದೇವಸಗೂರು ಉಪ ತಹಶೀಲ್ದಾರ್ ಈ ಬಗ್ಗೆ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.