ETV Bharat / state

ಸೇತುವೆ ವೀಕ್ಷಣೆಗೆ ಆಗಮಿಸಿದ ಶಾಸಕ: ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರು - Raja Venkatappa Nayaka

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ನುಗಡೋಣಿ - ಹೊಸೂರು ಸಂಪರ್ಕ ಸೇತುವೆ ಕಡಿತಗೊಂಡಿದ್ದು, ಸ್ಥಳ ಪರಿಶೀಲನೆಗೆ ತೆರಳಿದ ಶಾಸಕ ವೆಂಕಟಪ್ಪ ನಾಯಕ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Legislature escaped from the Causality
ಸೇತುವೆ ವೀಕ್ಷಣೆ ವೇಳೆ ನಡೆದ ಘಟನೆ
author img

By

Published : Sep 28, 2020, 7:39 PM IST

ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಸಿದಿದ್ದ ಸೇತುವೆಯ ಪರಿಶೀಲನೆ ನಡೆಸಲು ಶಾಸಕ ರಾಜಾ ವೆಂಕಟಪ್ಪನಾಯಕ ತೆರಳಿದ್ದರು. ಸೇತುವೆ ಪರಿಶೀಲನೆ ವೇಳೆ ಅದರ ಮುಂಭಾಗ ಕುಸಿದಿದ್ದು, ಶಾಸಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ಸೇತುವೆ ವೀಕ್ಷಣೆ ವೇಳೆ ನಡೆದ ಘಟನೆ

ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮಾನವಿ‌ ತಾಲೂಕಿನ ನುಗಡೋಣಿ - ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು‌ಬಿದ್ದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲು ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಜಾ ವೆಂಕಟಪ್ಪನಾಯಕ, ಈ ಕುರಿತು ವೀಕ್ಷಣೆ ಮಾಡುತ್ತಿರುವ ವೇಳೆ ಸೇತುವೆ ಮುಂಭಾಗ ಕುಸಿದು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಶಾಸಕರು ಅಪಾಯದಿಂದ ಪಾರಾಗಿದ್ದಾರೆ.

ಶಾಸಕರ ಜೊತೆಗಿದ್ದ ಇನ್ನಿಬ್ಬರು ಸೇತುವೆ ಕೆಳ ಭಾಗ ಬಿದ್ದಿದ್ದು, ಸ್ಥಳೀಯರು ಕೂಡಲೇ ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಿ ಶಾಸಕರ ವಾಹನದಲ್ಲಿಯೇ ಆಸ್ಪತ್ರೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.