ETV Bharat / state

ರಾಜ ಕಾಲುವೆ ಒತ್ತುವರಿ : ಭೂಗಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹ - undefined

ಮಂಗಳವಾರಪೇಟೆ ಬಳಿಯ ರಾಜ ಕಾಲುವೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಕಾಲುವೆಯ ಮೇಲೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಕೊಂಡಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ.

ರಾಜ ಕಾಲುವೆ ಒತ್ತುವರಿ
author img

By

Published : Jul 12, 2019, 4:35 AM IST

ರಾಯಚೂರು : ನಗರದ ಮಂಗಳವಾರಪೇಟೆಯ ರಾಜ ಕಾಲುವೆಯನ್ನು ಭೂಗಳ್ಳರು ಒತ್ತುವರಿ ಮಾಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಜ ಕಾಲುವೆ ಒತ್ತುವರಿ

ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಂಗಳವಾರಪೇಟೆ ಬಳಿಯ ರಾಜ ಕಾಲುವೆ ಒತ್ತುವರಿ ಮಾಡಿ, ಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.

ಈಗಾಗಲೇ ರಾಜಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಇದರ ಮುಂದುವರೆದ ಭಾಗವಾಗಿ ರಾಜ ಕಾಲುವೆಯ ಒಂದು ಭಾಗದಲ್ಲಿ ಭೂಗಳ್ಳರು ಮಳಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ನಿರತರಾಗಿದ್ದಾರೆ.

ಜಿಲ್ಲಾಡಳಿತದಿಂದ ಈ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಲ ಮನೆಗಳು ಹಾಗೂ ಅಂಗಡಿ ಮುಂಗಟ್ಟು ತೆರವು ಗೊಳಿಸಿತ್ತು. ಇದೆಲ್ಲದರ ನಡುವೆಯೂ ಈಗ ರಾಜಕಾಲುವೆ ಮೇಲೆ ಕಣ್ಣಿಟ್ಟಿರುವ ಭೂ ಗಳ್ಳರು ಕಾಲುವೆಯ ಒಂದು ಭಾಗದಲ್ಲಿ ಮರ ಹಾಕಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ರಾಯಚೂರು ನಗರದ ಮಂಗಳವಾರಪೇಟೆಯ ರಾಜ ಕಾಲುವೆಯನ್ನು ಭೂಗಳ್ಳರು ಒತ್ತುವಾರಿ ಮಾಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ನಿರತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Body:ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಂಗಳವಾರ ಪೇಟೆ ಬಳಿಯ ರಾಜ ಕಾಲುವೆ ಒತ್ತುವರಿ ಮಾಡಿ ಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಕೊಂಡಿದ್ದಾರೆ.
ಇಲ್ಲಿ ರಾಜಕಾಲುವೆಯ ಬಳಿಯ ಸಾರ್ವಜನಿಕ ಶೌಚಾಲಯವಿದ್ದು ಅದು ಸಾರ್ವಜನಿಕರಿಗೆ ಕಾಣದಂತಾಗಿದೆ ಏಕೆಂದರೆ ಸಾಕಷ್ಟು ಮಳಿಗೆಗಳ ನಡುವೆ ಮೂಲೆ ಗುಂಪಾಗಿದೆ.
ಹಲವಾರು ವರ್ಷಗಳಿಂದ ಪ್ರಮುಖ ಬಡಾವಣೆಗಳಿಂದ ಹಾದು ಹೋಗುವ ರಾಜಕಾಲುವೆ ಮೇಲೆ ಕಟ್ಟಡಗಳು,ಮನೆಗಳು ನಿರ್ಮಾಣ ಮಾಡಿಕೊಳ್ಳುವ ಮೂಲಕ ಕಾನೂನು ಉಲ್ಲಂಘನೆ ಮಾಡಿ ಸಾರ್ವಜನಿಕರ ಸಮಸ್ಯೆಗೆ ಕಾರಣರಾಗಿದ್ದಾರೆ.
ಸದರಿ ರಾಜಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ಮನೆ,ಮಳಿಗೆಗಳು ನಿರ್ಮಾಣ ಮಾಡಿಕೊಂಡಿದ್ದು ಇದರ ಮುಂದುವರೆದ ಭಾಗವಾಗಿ ರಾಜ ಕಾಲಯವೆಯ ಒಂದು ಭಾಗದಲ್ಲಿ ಭೂಗಳ್ಳರು ಮರಂ ಹಾಕಿ ಮಳಿಗೆಗಳು ನಿರ್ಮಾಣ ಮಾಡಿಕೊಳ ನಿರತರಾಗಿದ್ದಾರೆ.
ಜಿಲ್ಲಾಡಳಿತ ದಿಂದ ಈ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಲ ಮನೆಗಳು ಹಾಗೂ ಅಂಗಡಿ ಮುಂಗಟ್ಟು ತೆರವು ಗೊಳಿಸಿತ್ತು.
ಇದೆಲ್ಲದರ ನಡುವೆಯೂ ಈಗ ರಾಜಕಾಲುವೆ ಮೇಲೆ ಕಣ್ಣಿಟ್ಟಿರುವ ಭೂ ಗಳ್ಳರು ಕಾಲುವೆಯ ಒಂದು ಭಾಗದಲ್ಲಿ ಮರಂ ಹಾಕಿ ಮಳಿಗೆಗಳು ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದು ಖಂಡನೀಯ ಎಂದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವಿವಿಧ ಬಡಾವಣೆಯ ಕೊಳಚೆ ನೀರು ಹಾದು ಹೋಗಲು ರಾಜಕಾಲುವೆ ನಿರ್ಮಾಣ ಮಾಡಿದ್ದು ಈಗ ಒತ್ತುವರಿಯಿಂದ ಮಳೆ ಬಂದರೆ ಕಾಲುವೆಯ ನೀರು ರಸ್ತೆ ಬದಿಗೆ ಬಂದು ಗಬ್ಬು ನಾರುವ ಜೊತೆಗೆ ಸಾಂಕ್ರಾಮಿಕ ರೋಗಗಳ ಹರಡಲು ಕಾರಣವಾಗಿದೆ ಎಂದು ಇಲ್ಲಿನ ನಿವಾಸಿಗಳ ಆರೋಪ.
ಜಿಲ್ಲೆಯ ಸಾರ್ವಜನಿಕ ಆಸ್ತಿ ಕಾಪಾಡಬೇಕಾದ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಇಂತಹ ಭೂಗಳ್ಳರಿಗೆ ಎಚ್ಚರಿಕೆ ನೀಡಿ ಚಾಟಿ ಬೀಸಬೇಕಾಗಿತ್ತು ಆದ್ರೆ ಇಂತಹ ಯಾವುದೇ ಕ್ರಮ ವಹಿಸದೇ ಪರೋಕ್ಷವಾಗಿ ಭೂಗಳ್ಳರು ಹಾಗೂ ಒತ್ತುವರಿ ಮಾಡುವವರ ಬೆನ್ನೆಲುಬಾಗಿ ನಿಂತಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ, ಈ ಬಗ್ಗೆ ತ್ವರಿತ ವಾಗಿ ಗಮನಿಸಿ ಕ್ರಮ ಕೈಗೋಂಡು ರಾಜಕಾಲುವೆ ರಕ್ಷಿಸಬೇಕು ಇಲ್ಲದೇ ಹೋದಲ್ಲಿ ಹೋರಾಟಕ್ಕೆ ಇಳಿದು ನಗರಸಭೆಗೆ ಬಿಸಿ ಮುಟ್ಟಿಸಬೇಕಾದೀತು ಎಂದು ಇಲ್ಲಿನ ನಿವಾಸಿಗಳ ಒತ್ತಾಯವಾಗಿದೆ.

ಬೈಟ್: ವೆಂಕಟೇಶ ಸಾಮಾಜಿಕ ಕಾರ್ಯಕರ್ತ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.