ರಾಯಚೂರು : ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಿಂದಾಗಿ ರಾಯಚೂರು, ಸಿಂಧನೂರು ನಗರದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇದರ ನಡುವೆಯೂ ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ಪಿಎಸ್‌ಐ ಶೀಲಾ ಅವರು ಲಾಠಿ ರುಚಿ ತೋರಿಸಿದ್ದಾರೆ.
ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಜೀವನಾಂಶಕ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಲಾಗಿದೆ. ಆದರೆ, ರಾಯಚೂರು ನಗರದ ಪಟೇಲ್ ರಸ್ತೆಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಜನ ಓಡಾಡುವುದು ಕಂಡು ಬಂತು. ಅಂಗಡಿಗಳ ಮುಂದೆ ಮಾರ್ಕ್ ಹಾಕದೆ ಗುಂಪು-ಗುಂಪಾಗಿ ವ್ಯಾಪಾರ ನಡೆಸುತ್ತಿದ್ದವರಿಗೆ ಹಾಗೂ ಖರೀದಿ ಮಾಡುತ್ತಿದ್ದವರಿಗೆ ನೇತಾಜಿ ಪಿಎಸ್‌ಐ ಶೀಲಾ ಮೂಗನಗೌಡರ ಲಾಠಿ ರುಚಿ ತೋರಿಸುವ ಮೂಲಕ ಬಿಸಿ ಮುಟ್ಟಿಸಿದ್ರು. ಜೊತೆಗೆ ದಂಡ ವಿಧಿಸಿದ್ರು.
ಸೋಂಕಿನ ಭೀತಿ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ, ನಿಯಮಗಳನ್ನ ಪಾಲಿಸುವಂತೆ ಸೂಚಿಸಿದ್ರು. ನಿಯಮ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ್ರು. ಇನ್ನು ಅಮವಾಸ್ಯೆ ಹಿನ್ನೆಲೆ ಜನರು ತೆಂಗಿನಕಾಯಿ, ಪೂಜೆ ಸಾಮಾನು, ದಿನಸಿ ಅಂಗಡಿಗಳಲ್ಲಿ ಖರೀದಿಗಾಗಿ ಮುಗಿ ಬಿದ್ದಿರುವ ದೃಶ್ಯ ಕಂಡು ಬಂತು.