ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಇದರ ನಡುವೆಯೂ ನಗರದಲ್ಲಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಸದರ ಬಜಾರ್ ಠಾಣೆಯ ಲೇಡಿ ಪೊಲೀಸ್ ಆಫೀಸರ್ ಲಾಠಿ ರುಚಿ ತೋರಿಸಿ ಕೇಸ್ ದಾಖಲಿಸಿದ್ದಾರೆ.
ನಗರದ ಗಾಂಧಿ ಸರ್ಕಲ್ ಬಳಿ ಇರುವ ಬಟ್ಟೆ ಅಂಗಡಿಗಳು ಸೇರಿದಂತೆ ಅಂಗಡಿಯೊಳಗೆ ಕದ್ದು ಮುಚ್ಚಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದನ್ನ ತಪಾಸಣೆ ಮಾಡಿದ ಅವರು ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡು, ಲಾಠಿ ರುಚಿ ತೋರಿಸಿದ್ರು. ಗಾಂಧಿ ಸರ್ಕಲ್ ಬಳಿ ಇರುವ ರೇಮಾಂಡ್ ಅಂಗಡಿಗೆ ತಪಾಸಣೆಗಾಗಿ ಒಳಗೆ ಹೋದಾಗ ಅಂಗಡಿ ಮಾಲೀಕ ಲೇಡಿ ಪೊಲೀಸ್ ಆಫೀಸರ್ ಕಾಲು ಹಿಡಿದು, ಕೈ ಮುಗಿದು ಕ್ಷಮೆ ಕೇಳಿದರು.
ಸದ್ಯ ಜಿಲ್ಲೆಯಲ್ಲಿ ನಿತ್ಯ ಐನೂರಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ಸಹ 500ಕ್ಕೂ ಹೆಚ್ಚು ಪ್ರಕರಣಗಳು ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಕದ್ದುಮುಚ್ಚಿ ವ್ಯಾಪಾರ ನಡೆಸುವ ಮೂಲಕ ಕೊರೊನಾಗೆ ಕ್ಯಾರೆ ಎನ್ನದಿರುವುದು ವಿಪರ್ಯಾಸ.