ರಾಯಚೂರು: ಚುನಾವಣೆಗಳಲ್ಲಿ ಸೋತರೂ ಸಹ ಸಿದ್ದರಾಮಯ್ಯಗೆ ಸೊಕ್ಕು ಇಳಿದಿಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಮಂತ್ರಾಲಯದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾ.ಪಂ. ಮತ್ತು ಜಿ.ಪಂ ಚುನಾವಣೆ ವಿಚಾರವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಎಲ್ಲಾ ಚುನಾವಣೆಗಳಲ್ಲಿ ಸೋತರೂ ಸಹ ಸಿದ್ದರಾಮಯ್ಯಗೆ ಬುದ್ಧಿ ಕಲಿತಿಲ್ಲ. ನಮ್ಮ ಸಂಘಟನೆ ಶಕ್ತಿಶಾಲಿಯಾಗಿದೆ. ಇಡೀ ಕರ್ನಾಟಕದ ಬೂತ್ ಮಟ್ಟದಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರು ಇದ್ದಾರೆ. ನರೇಂದ್ರ ಬಾಬು ಒಬಿಸಿ ಅಧ್ಯಕ್ಷರಾದ ಬಳಿಕ ಶಕ್ತಿಶಾಲಿ ಕಾರ್ಯಕರ್ತರು ನಮ್ಮ ಕೈ ಜೋಡಿಸಿದ್ದಾರೆ. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡಲು ಸಹ ಕಾರ್ಯಕರ್ತರು ಇಲ್ಲ. ಸದಸ್ಯತ್ವ ಮಾಡುವವರಿಗೆ ಮೊಬೈಲ್ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್ ಬಂದಿದೆ ಎಂದು ಗೇಲಿ ಮಾಡಿದರು. ಇದೇ ವೇಳೆ ಬಿಜೆಪಿಗೂ ಕಾಂಗ್ರೆಸ್ಗೂ ದಯವಿಟ್ಟು ಹೋಲಿಕೆಯನ್ನೇ ಮಾಡಬೇಡಿ. ಕಾಂಗ್ರೆಸ್ ನರಕ, ಬಿಜೆಪಿ ಸ್ವರ್ಗವೆಂದು ಸಚಿವ ಈಶ್ವರಪ್ಪ ಹೇಳಿದ್ರು.
ಇದನ್ನೂ ಓದಿ: ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯ ಹಿಂದೆ ಇಡೀ ಕುರುಬ ಸಮಾಜವಿದೆ, ಇಡೀ ಕರ್ನಾಟಕ ರಾಜ್ಯವಿದೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇದ್ದಾರೆ ಎಂದೆಲ್ಲಾ ಹೇಳಿದ್ರು. ಇವರೆಲ್ಲ ಇದ್ರೂ ಏಕೆ ಸೋತ್ರು? ಸಿದ್ದರಾಮಯ್ಯ ಇಂದು ಹೇಳಲಿ ನೋಡೋಣ, ನನ್ನ ಹಿಂದೆ ಹಿಂದುಳಿದವರು ಇದ್ದಾರೆ ಅಂತ. ಹಿಂದುಳಿದವರ ಸಮಾವೇಶ ಮಾಡಲು ಸಹ ಸ್ವಾತಂತ್ರ್ಯ ಇಲ್ಲ. ಡಿ ಕೆ ಶಿವಕುಮಾರ್ ಸಿದ್ದರಾಮಯ್ಯನವರ ಕಾಲು ಕಟ್ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತ್ಯೇಕ ಸಭೆ ಕೂಡ ಮಾಡದಂತೆ ಆಗಿದೆ. ಇದು ರಾಜ್ಯದ ಕಾಂಗ್ರೆಸ್ ಪರಿಸ್ಥಿತಿ ಆಗಿದೆ. ಕಾಂಗ್ರೆಸ್ನದ್ದು ಬರೀ ಘೋಷಣೆ, ಉತ್ತರಕುಮಾರನ ಪೌರುಷವೆಂದು ಲೇವಡಿ ಮಾಡಿದರು.