ETV Bharat / state

ಅಸಮರ್ಪಕ ಮಾಹಿತಿ: ವಿಫಲವಾದ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆ - kannada news

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಜಿ. ಕುಮಾರನಾಯಕ ಅಧ್ಯಕ್ಷತೆಯಲ್ಲಿ ಬರ ಪರಿಹಾರ ಕಾಮಗಾರಿ ಸಭೆ ನಡೆಯಿತು.

ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆ
author img

By

Published : May 11, 2019, 4:44 AM IST

ರಾಯಚೂರು : ಜಿಲ್ಲೆಯಲ್ಲಿ ಭೀಕರವಾಗಿ ಆವರಿಸಿರುವ ಬರಗಾಲದ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿತ್ತು. ಆದರೆ ಅಧಿಕಾರಗಳ ಸಮರ್ಪಕವಾದ ಮಾಹಿತಿ ಕೊರತೆಯಿಂದ ಸಭೆ ವಿಫಲಗೊಂಡಿತು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಜಿ. ಕುಮಾರನಾಯಕ ಅಧ್ಯಕ್ಷತೆಯಲ್ಲಿ ಬರ ಪರಿಹಾರ ಕಾಮಗಾರಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯಲ್ಲಿ ಆವರಿಸಿರುವ ಬರದ ಕುರಿತು ಸಮರ್ಪಕವಾದ ಮಾಹಿತಿಯನ್ನ ಒದಗಿಸುವ ಜೊತೆಗೆ ಕೈಕೊಂಡು ಕಾಮಗಾರಿಗಳ ಬಗ್ಗೆ ಮಾಹಿತಿಯನ್ನ ಅಧಿಕಾರಿಗಳು ನೀಡಬೇಕಿತ್ತು. ಆದ್ರೆ ಆರ್​ ಡಬ್ಲ್ಯೂಎಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಕುರಿತಂತೆ ಸಮರ್ಪಕವಾದ ಮಾಹಿತಿ ನೀಡಿದ ಕಾರಣ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆ

ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ನೀರು ಸರಬರಾಜು ಮಾಡುವುದಕ್ಕೆ ಅನುದಾನ ಕೊರತೆಯಿಲ್ಲ. ಆದರೆ ಆರ್​ಡಬ್ಲ್ಯೂಎಸ್​ಎಎ ಮತ್ತು ಸಿಂಧನೂರು ಎಇಇಯಿಂದ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದ ಅಧಿಕಾರಿಗಳು ಕಾಮಗಾರಿ ನಡೆಯುತ್ತಿದೆ, ಪ್ರಗತಿ ಹಂತದಲ್ಲಿದೆ ಎಂಬ ಮಾಹಿತಿಯನ್ನ ಸಭೆಗೆ ನೀಡಿದರು.

ಅಧಿಕಾರಿಗಳು ನೀಡಿದ ಮಾಹಿತಿ ಗಮನಿಸಿ ಯಾವ ಯಾವ ಗ್ರಾಮದಲ್ಲಿ ಕಾಮಗಾರಿ ಎಷ್ಟು ಪ್ರಗತಿಯಲ್ಲಿದೆ ಎನ್ನುವ ಪ್ರಶ್ನೆ ಕೇಳುತ್ತಿದ್ದ ಹಾಗೆ ತಬ್ಬಿಬ್ಬುಗೊಂಡ ಅಧಿಕಾರಿಗಳು ಅಸಮಪರ್ಕ ಉತ್ತರ ನೀಡಿದರು. ಇದರಿಂದ ಬೆಸತ್ತ ಜಿ.ಕುಮಾರನಾಯಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Intro:ಸ್ಲಗ್: ಬರ ಮೀಟಿಂಗ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 10-೦5-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ಭೀಕರವಾಗಿ ಆವರಿಸಿರುವ ಬರಗಾಲದ ಬರ ಪರಿಹಾರ ಕಾಮಗಾರಿಗಳನ್ನ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡು ಕೊಳ್ಳಬೇಕಾಗಿತ್ತು. ಆದ್ರೆ ಅಧಿಕಾರಗಳ ಅಸಮರ್ಪಕವಾದ ಸಭೆಯಲ್ಲಿ ಹೆಚ್ಚಾಗಿ ಚರ್ಚೆ ನಡೆಯುವ ಜಿಲ್ಲೆಯ ಜನರಿಗೆ ಬರ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎನ್ನುವುದು ಬಹಿರಂಗವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅಧ್ಯಕ್ಷತೆಯಲ್ಲಿ ಬರ ಪರಿಹಾರ ಕಾಮಗಾರಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯಲ್ಲಿ ಆವರಿಸಿರುವ ಬರದ ಕುರಿತು ಸಮರ್ಪಕವಾದ ಮಾಹಿತಿಯನ್ನ ಒದಗಿಸುವ ಜೊತೆಗೆ ಕೈಕೊಂಡು ಕಾಮಗಾರಿಗಳ ಬಗ್ಗೆ ಮಾಹಿತಿಯನ್ನ ನೀಡಬೇಕು. ಆರ್ ಡಬ್ಲ್ಯೂಎಸ್ ಇಲಾಖೆಯಿಂದ ಜಿಲ್ಲೆಯ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಕುರಿತಂತೆ ಸಮರ್ಪಕವಾದ ಮಾಹಿತಿ ನೀಡಿದ್ದರೆ, ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಬೈಟ್.1: ಜಿ.ಕುಮಾರನಾಯಕ, ಜಿಲ್ಲಾ ಉಸ್ತುವರಿ ಕಾರ್ಯದರ್ಶಿ, ರಾಯಚೂರು
ವಾಯ್ಸ್ ಓವರ್.2: ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಅನುದಾನ ಕೊರತೆಯಿಲ್ಲ. ಆದ್ರೆ ಆರ್ ಡಬ್ಲ್ಯೂಎಸ್ ಎಎ ಮತ್ತು ಸಿಂಧನೂರು ಎಇಇಯಿಂದ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕಾಮಗಾರಿ ನಡೆಯುತ್ತಿದೆ. ಪ್ರಗತಿ ಹಂತದಲ್ಲಿದೆ ಎನ್ನುವ ಮಾಹಿತಿಯನ್ನ ಸಭೆಗೆ ನೀಡಿದ್ರು. ಆದ್ರೆ ಅಧಿಕಾರಿಗಳನ್ನ ನೀಡಿದ ಮಾಹಿತಿ ಗಮನಿಸಿ ಯಾವ ಯಾವ ಗ್ರಾಮದಲ್ಲಿ ಕಾಮಗಾರಿ ಎಷ್ಟು ಹಂತದಲ್ಲಿ ಪ್ರಗತಿಯಲ್ಲಿದೆ ಎನ್ನುವ ಪ್ರಶ್ನೆ ಕೇಳುತ್ತಿದ್ದು, ಅಧಿಕಾರಿಗಳು ತಬ್ಬಿಕೊಂಡು ಅಸಮಪರ್ಕ ಉತ್ತರ ನೀಡಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ರು.
ಬೈಟ್.2: ಜಿ.ಕುಮಾರನಾಯಕ, ಜಿಲ್ಲಾ ಉಸ್ತುವರಿ ಕಾರ್ಯದರ್ಶಿ, ರಾಯಚೂರು
Conclusion:ವಾಯ್ಸ್ ಓವರ್.3: ಒಟ್ನಿಲ್ಲಿ, ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿ ಜನ-ಜಾನುವಾರು ತತ್ತರಿಸುತ್ತಿದ್ದಾರೆ. ಸಮರ್ಪಕವಾಗಿ ಬರ ಕಾಮಗಾರಿಯನ್ನ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದು ಸಭೆಯಲ್ಲಿ ನೀಡಿದ ದಾಖಲೆಯಿಂದ ಬಹಿರಂಗಗೊಂಡಿದ್ದು, ಇನ್ನಾದರೂ ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಬರ ಪರಿಹಾರ ಕಾಮಗಾರಿಯನ್ನ ಕೈಗೆತ್ತಿಕೊಳ್ಳಯತ್ತ ಎನ್ನುವುದನ್ನ ಕಾದು ನೋಡಬೇಕಾಗಿದೆ.
-ಮಲ್ಲಿಕಾರ್ಜುನ ಸ್ವಾಮಿ, ಈಟಿವಿ ಭಾರತ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.