ETV Bharat / state

ಹ್ಯಾಟ್ರಿಕ್​ ಗೆಲುವಿನತ್ತ ಶಿವರಾಜ ಪಾಟೀಲ್ ಚಿತ್ತ: ಬ್ರೇಕ್ ಹಾಕಲು ಕಾಂಗ್ರೆಸ್ ಕಸರತ್ತು - ಬೋಸರಾಜು

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನೊಂದಿಗೆ ಚುನಾವಣಾ ಕಾವೂ ಹೆಚ್ಚುತ್ತಿದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರವು ಕುತೂಹಲ ಕಣವಾಗಿ ಮಾರ್ಪಟ್ಟಿದೆ.

karnataka-assembly-elections-2023-details-of-raichur-city-constituency
ಹ್ಯಾಟ್ರಿಕ್​ ಮೇಲೆ ಶಿವರಾಜ ಪಾಟೀಲ್ ಕಣ್ಣು: ಬ್ರೇಕ್ ಹಾಕಲು ಕಾಂಗ್ರೆಸ್ ಕಸರತ್ತು
author img

By

Published : Apr 7, 2023, 7:32 PM IST

ರಾಯಚೂರು: ಜಿಲ್ಲೆಯ 7 ಕ್ಷೇತ್ರಗಳಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರವನ್ನು ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಶಿವರಾಜ ಪಾಟೀಲ್ ಹ್ಯಾಟ್ರಿಕ್ ಸಾಧನೆಯ ಪ್ರಯತ್ನದಲ್ಲಿದ್ದಾರೆ. ಆದರೆ, ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ಅಧಿಕವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತದೆ ಎಂಬುವುದರ ಮೇಲೆ ಚುನಾವಣಾ ಹಣಾಹಣಿ ನಿರ್ಧಾರವಾಗಲಿದೆ.

ಏಳು ಕ್ಷೇತ್ರಗಳ ಪೈಕಿ ರಾಯಚೂರು ನಗರ ಮತ್ತು ಸಿಂಧನೂರು ಕ್ಷೇತ್ರಗಳು ಮಾತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಕಾಂಗ್ರೆಸ್‌ನ ಭದ್ರ ಕೋಟೆ ಎಂದೇ ರಾಯಚೂರು ಕ್ಷೇತ್ರ ಬಿಂಬಿತ. ಈ ಕ್ಷೇತ್ರದಲ್ಲಿ ಸದ್ಯ ಮೂರು ರಾಜಕೀಯ ಪಕ್ಷಗಳು ಪ್ರಬಲವಾಗಿರುವುದಲ್ಲದೇ, ಪಕ್ಷಕ್ಕಿಂತ ವೈಯಕ್ತಿಕ ಬಲಾಬಲದ ಮೇಲೆ ಗೆಲುವು ನಿರ್ಧಾರವಾಗಲಿದೆ.

ಇದುವರೆಗೆ ನಡೆದ 15 ಚುನಾವಣೆಗಳಲ್ಲಿ ಏಳು ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮತದಾರರು ಮಣೆ ಹಾಕಿದ್ದಾರೆ. ಜೊತೆಗೆ ಇತರ ಸಮುದಾಯದ ಅಭ್ಯರ್ಥಿಗಳನ್ನೂ ಮತದಾರರು ಗೆಲ್ಲಿಸಿದ್ದಾರೆ. ಆದರೆ, ಸತತ ಎರಡು ಬಾರಿ ಗೆದ್ದು ಶಾಸಕರಾದವರಿಗೆ ಹ್ಯಾಟ್ರಿಕ್ ಗೆಲುವು ದಕ್ಕಿಲ್ಲ. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಡಾ. ಶಿವರಾಜ ಪಾಟೀಲ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎರಡನೇ ಬಾರಿ ಶಾಸಕರಾಗಿದ್ದಾರೆ. ಈ ಬಾರಿ ಸಹ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇನ್ನಿಬ್ಬರು ಮುಖಂಡರು ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ. ಇದುವರೆಗೆ ಟಿಕೆಟ್ ಫೈನಲ್ ಆಗರಿವುದು ಗೊಂದಲಕ್ಕೆ ಕಾರಣವಾಗಿದೆ. ಆದರೂ, ಶಿವರಾಜ್ ಪಾಟೀಲ್ ಟಿಕೆಟ್ ಸಿಗಲಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಹಿತಿ
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಹಿತಿ

ಕಾಂಗ್ರೆಸ್​ನಲ್ಲಿ ಟಿಕೆಟ್ ಕಗ್ಗಂಟು: ಕಾಂಗ್ರೆಸ್​ನಲ್ಲಿ ಟಿಕೆಟ್​ ಹಂಚಿಕೆ ಕಗ್ಗಂಟಾಗಿ ಏರ್ಪಟ್ಟಿದೆ. ಹಿಂದಿನಿಂದಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ತನ್ನ ನಿಲುವು ಬದಲಿಸುತ್ತಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಟಿಕೆಟ್‌ಗಾಗಿ ಒಟ್ಟು 16 ಜನರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್ 12 ಜನ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎನ್ನುವ ಬಲವಾದ ಒತ್ತಾಯ ಕೇಳಿ ಬರುತ್ತಿದೆ. ಅಲ್ಲದೇ, ಸಮುದಾಯದಿಂದ ಪ್ರತಿಭಟನೆಗಳನ್ನು ಸಹ ನಡೆಸಲಾಗಿದೆ.

ಮತ್ತೊಂದೆಡೆ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಸಹ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ಧಾರೆ. ಇಬ್ಬರಲ್ಲಿ ಒಬ್ಬರಿಗೆ ಸಿಗಲಿ ಎಂಬ ಲೆಕ್ಕಾಚಾರ ಇಲ್ಲಿದ್ದಾರೆ. ಇದೀಗ ಎನ್.ಎಸ್.ಬೋಸರಾಜ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ಕಾಂಗ್ರೆಸ್​ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ, ಕ್ಷೇತ್ರದ ಹೆಸರು ಉಲ್ಲೇಖಿಸಿಲ್ಲ. ಜೆಡಿಎಸ್​ನಿಂದ ನಗರಸಭೆ ಮಾಜಿ ಅಧ್ಯಕ್ಷ ಇ.ವಿನಯಕುಮಾರ, ರಾಮನಗೌಡ ಏಗನೂರು ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ.

ಮೂರು ಫಲಿತಾಂಶಗಳ ಹಿನ್ನೋಟ: ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,29,475 ಮತದಾರರು ಇದ್ದಾರೆ. ಇದರಲ್ಲಿ 1,13,318 ಪುರುಷರು, 1,16,056 ಮಹಿಳಾ ಮತದಾರರು ಹಾಗೂ 101 ಇತರರು ಮತದಾನ ಹೆಚ್ಚು ಹೊಂದಿದ್ದಾರೆ. 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದ ಸೈಯದ್ ಯಾಸೀನ್ ಗೆಲುವು ಸಾಧಿಸಿದ್ದರು. ಆಗ ಯಾಸೀನ್​ 28,801 ಮತಗಳ ಪಡೆದಿದ್ದರು. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ದಿ. ಎಂ.ಈರಣ್ಣ 20,440 ಮತಗಳ ಪಡೆದು 8,361 ಮತಗಳ ಅಂತರದಿಂದ ಸೋಲು ಕಂಡಿದ್ದರು.

2013ರಲ್ಲಿ ಜೆಡಿಎಸ್​ನಿಂದ ಡಾ. ಶಿವರಾಜ ಪಾಟೀಲ್ ಗೆಲುವು ಕಂಡಿದ್ದರು. ಎದುರಾಳಿ ಕಾಂಗ್ರೆಸ್​ನ ಸೈಯದ್ ಯಾಸೀನ್ 37,392 ಮತಗಳ ಪಡೆದು ಸೋತಿದ್ದರು. 45,263 ಮತಗಳ ಗಳಿಸಿದ್ದ ಶಿವರಾಜ ಪಾಟೀಲ್​ 7,871 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ನಂತರ 2018ರಲ್ಲಿ ಶಿವರಾಜ ಪಾಟೀಲ್ ಬಿಜೆಪಿಯಿಂದ ಚುನಾವಣೆ ಎದುರಿಸಿದ್ದರು. ಆಗಲೂ ಯಾಸೀನ್​ ವಿರುದ್ಧ 10,991 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಬಿಜೆಪಿಯ ಶಿವರಾಜ್​ 56,511 ಮತಗಳು ಮತ್ತು ಕಾಂಗ್ರೆಸ್​ನ ಯಾಸೀನ್ 45,520 ಪಡೆದಿದ್ದರು.

ಇದೀಗ ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ. ಆದರೆ, ಈ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್​ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಭಾರಿ ತಯಾರಿ ನಡೆದಿದೆ. ಹೀಗಾಗಿ ಬಿಜೆಪಿಯ ಶಿವರಾಜ ಪಾಟೀಲ್‌ಗೆ ಪ್ರತಿಸ್ಪರ್ಧಿ ಯಾರು ಆಗಲಿದ್ದಾರೆ ಎಂಬುವುದು ಸದ್ಯದ ಕುತೂಹಲ.

ಇದನ್ನೂ ಓದಿ: ರಾಯಚೂರು: 5 ಕ್ಷೇತ್ರಗಳ 'ಕೈ' ಅಭ್ಯರ್ಥಿಗಳ ಟಿಕೆಟ್ ಪೆಂಡಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.