ರಾಯಚೂರು: ದಕ್ಷಿಣ ಅಮೆರಿಕದ ಬ್ರೆಜಿಲ್‌ನಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಕನ್ನಡಿಗರು ಆಚರಿಸಿದ್ದಾರೆ.
ರಾಯಚೂರು ಮೂಲದ ರಂಗರಾವ ದೇಸಾಯಿ ಕಾಡ್ಲೂರು ಕುಟುಂಬ ತಮ್ಮ ಭಾರತೀಯ ಸ್ನೇಹಿತರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ರು. ಕನ್ನಡ ಉತ್ಸವದಲ್ಲಿ ಬ್ರೆಜಿಲ್ ದೇಶದ ಭಾರತೀಯ ರಾಯಭಾರಿ ಕಚೇರಿಯ ಅಮಿತ್ ಮಿಶ್ರಾ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಶುಭ ಕೋರಿದ್ರು.
ಭಾರತದಿಂದ ಬ್ರೆಜಿಲ್ ರಾಯಭಾರಿ ಕಚೇರಿಯ ಅಧಿಕಾರಿಗಳಾದ ವೇಣುಗೋಪಾಲ್ ಹಾಗೂ ಹರೀಶ ಸಹ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ. ರಾಜ್ಯೋತ್ಸವದ ಸಂಭ್ರಮದ ವೇಳೆ ಕರ್ನಾಟಕ ಸಾಂಪ್ರದಾಯಿಕ ಉಡುಗೆ ಮತ್ತು ಅಡುಗೆ ಗಮನ ಸೆಳೆಯಿತು.