ETV Bharat / state

ಬಿಜೆಪಿ ಶಾಸಕ ಶಿವನಗೌಡ ನಾಯಕ ವಿರುದ್ಧ ಪೊಲೀಸರಿಗೆ ದೂರು

ಪೊಲೀಸರ ಮೇಲೆ ಒತ್ತಡ ಹಾಕಿ ದೇವದುರ್ಗ ತಾಲೂಕಿನ ಜೆಡಿಎಸ್ ಮುಖಂಡನ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜೆಡಿಎಸ್ ಮುಖಂಡ ಎಂ.ವೀರುಪಾಕ್ಷಿ ದೂರು ಸಲ್ಲಿಸಿದ್ದಾರೆ.

JDS leader lodged a complaint against BJP MLA K Shivanagouda Naik in Raichur
ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ದೂರು ದಾಖಲಿಸಿದ ಜೆಡಿಎಸ್​ ಮುಖಂಡ
author img

By

Published : Apr 21, 2021, 9:10 AM IST

ರಾಯಚೂರು: ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ದೊಡ್ಡ ಭ್ರಷ್ಟ ಶಾಸಕ ಎಂದು ಜೆಡಿಎಸ್ ಮುಖಂಡ ಎಂ.ವೀರುಪಾಕ್ಷಿ ಆರೋಪಿಸಿದ್ದಾರೆ.

ಜೆಡಿಎಸ್​ ಮುಖಂಡ ಎಂ.ವೀರುಪಾಕ್ಷಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದುರ್ಗ ತಾಲೂಕಿನಲ್ಲಿ ಮದ್ಯ, ಮರಳು, ಮಟ್ಕಾ ಮಾಫಿಯಾ ನಡೆಸುವ ದೊಡ್ಡ ಭ್ರಷ್ಟ ಶಾಸಕ ಕೆ.ಶಿವನಗೌಡ. ಈ ಎಲ್ಲಾ ಮಾಫಿಯಾಗಳಿಗೆ ಹೊಣೆಯಾಗಿಸಿ ಜೆಡಿಎಸ್ ಮುಖಂಡರ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುತ್ತಿದ್ದಾರೆ. ಇತ್ತೀಚೆಗೆ ಗಬ್ಬೂರು ಗ್ರಾಮದ ಬಳಿ ಕಲ್ಲಿನ ಕ್ವಾರಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಆ ಕಲ್ಲಿನ ಕ್ವಾರಿ ಸರ್ಕಾರಕ್ಕೆ ಸೇರಿದೆ. ಆದರೆ ದೇವದುರ್ಗ ತಾಲೂಕಾಧ್ಯಕ್ಷ ಬುಡ್ಡನಗೌಡ ಸೇರಿದ‌ ಕ್ವಾರಿ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ಇರುವುದರಿಂದ ದೊಡ್ಡ ಹೋರಾಟ ಕೈಬಿಟ್ಟು ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸುವ ಮೂಲಕ ಮನವಿ ಮಾಡಿದ್ದೇವೆ. ಇದಕ್ಕೆ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳವುದಾಗಿ ಎಂದು ಎಚ್ಚರಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಎಸ್ಪಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಇಂದಿನಿಂದ ಕಠಿಣ ನಿಯಮ ಜಾರಿ; ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿರ್ಬಂಧ?

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.