ETV Bharat / state

ಪಕ್ಷದ ಹೈಕಮಾಂಡ್​​ ತೀರ್ಮಾನದಂತೆ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ: ಶ್ರೀರಾಮುಲು

ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ‌ ಆಡಳಿತ ನಡೆಸುತ್ತದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚುನಾವಣೆಯಲ್ಲಿ ಸೋಲುಂಡಿರುವ ಲಕ್ಷ್ಮಣ ಸವದಿಗೆ ಬಿಜೆಪಿ  ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗೆದ್ದವರಿಗೆ ಬೆಲೆ ಎಂದಲ್ಲ. ಇದು ಪಕ್ಷದ ಹೈಕಮಾಂಡ್ ತೀರ್ಮಾನ ಎಂದರು.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಪಕ್ಷದ ಹೈಕಮಾಂಡ್ ತಿರ್ಮಾನ: ಶ್ರೀರಾಮುಲು
author img

By

Published : Aug 22, 2019, 1:37 PM IST

ರಾಯಚೂರು: ಬಿಜೆಪಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ‌ ಆಡಳಿತ ನಡೆಸುತ್ತದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಪಕ್ಷದ ಹೈಕಮಾಂಡ್ ತಿರ್ಮಾನ: ಶ್ರೀರಾಮುಲು

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ರು. ಚುನಾವಣೆಯಲ್ಲಿ ಸೋಲುಂಡಿರುವ ಲಕ್ಷ್ಮಣ ಸವದಿಗೆ ಬಿಜೆಪಿ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗೆದ್ದವರಿಗೆ ಬೆಲೆ ಎಂದಲ್ಲ. ಇದು ಪಕ್ಷದ ಹೈಕಮಾಂಡ್ ತೀರ್ಮಾನ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷದ ವಿಚಾರದಲ್ಲಿ ನಾನು ಹೇಳುವುದು ಕೇವಲ ಹೇಳಿಕೆಯಾಗುತ್ತದೆ ಅಷ್ಟೇ. ಇಲ್ಲಿ ನನ್ನ ನಿರ್ಧಾರವೇನು ಇಲ್ಲ. ಹೈಕಮಾಂಡ್​ನಂತೆ ನಮ್ಮ ನಡೆ ಎಂದರು.

ಇದೇ ವೇಳೆ, ಕೃಷ್ಣ ನದಿಯಿಂದ ಆಗಿರುವ ನೆರೆ ಹಾವಳಿ ವಿಕ್ಷೇಣೆ ಮಾಡಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಹಾಗೂ ವಿದ್ಯುತ್ ಸಮಸ್ಯೆ ಐದು‌ ದಿನಗಳಲ್ಲಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯದಲ್ಲೇ ಕೇಂದ್ರ ಅಧ್ಯಯನ ತಂಡ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದರು.

Intro:ಬಿಜೆಪಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಮೂರುವರೆ ವರ್ಷಗಳ ಕಾಲ ಬಿಜೆಪಿ ಸರಕಾರದಲ್ಲಿ ರಾಜ್ಯದಲ್ಲಿ‌ ಆಡಳಿತ ನಡೆಸುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

Body:ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕರ ಸಂಸದ ಕಚೇರಿ ಉದ್ಘಾಟನೆ ಕಾರ್ಯಕ್ರಮ ಭಾಗವಹಿಸಿ‌ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಶಾಸಕ ಉಮೇಶ ಕತ್ತಿಯವರ ಅಸಮಾಧಾನ ವಿಚಾರವನ್ನ ಕೇಳಿಲ್ಲ. ಬಿಜೆಪಿಯ ಲಕ್ಷ್ಮಣ ಸವದಿ ಸೊತರು ಸಚಿವ ಸ್ಥಾನ ನೀಡಿರುವ ವಿಷಯ ಪ್ರತಿಕ್ರಿಯೆ ನೀಡಿದ ಅವರು, ಗೆದ್ದವರಿಗೆ ಬೆಲೆ ಇಲ್ಲ ಎನ್ನುವ ಉದ್ದೇಶವಿಲ್ಲ. ಅದು ಪಕ್ಷದ ಹೈಕಮಾಂಡ್ ತಿರ್ಮಾನ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ಪಕ್ಷದ ವಿಚಾರದಲ್ಲಿ ನಾನು ಹೇಳಿರುವುದು ಕೇವಲ ಹೇಳಿಕೆ ಯಾಗುತ್ತದೆ. ಯಾಕೆಂದ್ರೆ ಪಕ್ಷದಲ್ಲಿ ಇವರಿಗೆ ಕೊಂಡಿ ಎಂದು ನಾನು ಹೇಳಿದ್ದಾರೆ ಕೊಂಡುವುದಿಲ್ಲ, ನಾನು ಪಕ್ಷದಿಂದ ತೆಗೆದು ಹಾಕಿ ಅಂದ್ರೆ ತೆಗೆದು ಹಾಕುವುದಿಲ್ಲ. ಅದು ಏನಿದ್ದರೂ ಪಕ್ಷದ ತಿರ್ಮಾನ ಮಾಡುತ್ತದೆ. ನಾನು ಅಷ್ಣ ದೊಡ್ಡ ವ್ಯಕ್ತಿಯಲ್ಲವೆಂದರು.

Conclusion:ರಾಯಚೂರು ಜಿಲ್ಲೆಯ ಕೃಷ್ಣ ನದಿಯಿಂದ ಆಗಿರುವ ನೆರೆ ಹಾವಳಿ ವಿಕ್ಷೇಣೆ ಮಾಡಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಿರುವ ವಿದ್ಯುತ್ ಸಮಸ್ಯೆ ಐದು‌ ದಿನಗಳಲ್ಲಿ ಸರಿಪಡಿಸುವಂತೆ ಸೂಚನೆ ನೀಡಿದ್ದಾನೆ ಎಂದ ಅವರು, ಕೇಂದ್ರ ಅಧ್ಯಯನ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದರು. ಈ ವೇಳೆ ಸಚಿವ ಪ್ರಭು ಚೌವ್ಹಣ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ್ ಪಾಟೀಲ್ ಇದರು.

ಬೈಟ್.೧: ಶ್ರೀರಾಮುಲು, ಸಚಿವ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.