ರಾಯಚೂರು:ಸರ್ಕಾರದ ಅಧೀನದಲ್ಲಿ ಸ್ವತಂತ್ರವಾಗಿ ಶಿಸ್ತುಬದ್ಧವಾಗಿ ತುರ್ತು ಸೇವೆಗಳ ಅಗತ್ಯ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ರಕ್ಷಕದಳ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ವರ್ಷದ 365 ದಿನ ನಿರಂತರ ಕೆಲಸ ಸಿಗುವಂತಾಗಬೇಕು ಎಂದು ಪ್ರಗತಿಪರ ಕನ್ನಡಿಗರ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಈರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ರಕ್ಷಕ ದಳ ರಾಜ್ಯ ಮಟ್ಟದ ಉನ್ನತ ತರಬೇತಿ ಪಡೆದು ಚುನಾವಣೆ,ಸಭೆ ಸಮಾರಂಭ,ಇತರೆ ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಕೆಲಸ ಮಾಡುತ್ತಿದ್ದು,ಅನೇಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಇವರಿಗೆ ಸೇವಾ ಭದ್ರತೆ ಒದಗಿಸಬೇಕು,ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಭದ್ರತಾ ಕರ್ತವ್ಯಕ್ಕೆ ಗೃಹ ರಕ್ಷಕದಳದವರಿಗೆ ಆದ್ಯತೆ ನೀಡಬೇಕು. ವೈದ್ಯಕೀಯ ಸೌಲಭ್ಯ ಸೇರಿ ಪೊಲೀಸ್ ಇಲಾಖೆಯಂತೆ ಇವರಿಗೂ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.