ETV Bharat / state

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ.. ಜನ ಜೀವನ ಅಸ್ತವ್ಯಸ್ತ.. - ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತ

ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತಗೊಂಡಿದೆ. ಬಾಲಾಜಿ ಕ್ಯಾಂಪ್​ದ ಬೈರೇಶ್ವರ ಕ್ಯಾಂಪ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ:
author img

By

Published : Aug 13, 2019, 8:20 AM IST

ರಾಯಚೂರು: ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್​ ನೀರು ಹರಿಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ.

ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು ತಾಲೂಕುಗಳ ನದಿ ಪಾತ್ರ ಜನರಿಗೆ ತೊಂದರೆ ಉಂಟಾಗಿದೆ. ಹೊಲಕ್ಕೆ ನೀರು ಹರಿಸುವ ಉದ್ದೇಶದಿಂದ ರೈತರು ನದಿಯಲ್ಲಿ ಅಳವಡಿಸಿದ್ದ ಪಂಪ್​ಸೆಟ್​ಗಳು ನೀರುಪಾಲಾಗಿವೆ.

ತುಂಗಭದ್ರಾದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ..

ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ಜಲಾವೃತಗೊಂಡಿದೆ. ಬಾಲಾಜಿ ಕ್ಯಾಂಪ್​ದ ಬೈರೇಶ್ವರ ಕ್ಯಾಂಪ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಈಗಾಗಲೇ ಕೃಷ್ಣ ನದಿಯಿಂದ ಜಿಲ್ಲೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ತುಂಗಭದ್ರಾ ನದಿಯ ಪ್ರವಾಹ ಎದುರಾಗಿರುವುದು ಜಿಲ್ಲೆಯ ಜನರಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಢೇಸೂಗೂರಿನ ಸರ್ಕಾರಿ ಶಾಲೆ, ಗ್ರಾಮ ಪಂಚಾಯತ್ ಹಾಗೂ ಉರ್ದುಶಾಲೆ, ಸಿಂಗಾಪೂರದ ಮುಕುಂದ ಸರ್ಕಾರಿ ಶಾಲೆ ಹಾಗೂ ಬಾಲಾಜಿ ಕ್ಯಾಂಪ್​ನ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.

Intro:ಸ್ಲಗ್: ತುಂಗಭದ್ರಾ ಪ್ರವಾಹ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 13-೦8-2019
ಸ್ಥಳ: ರಾಯಚೂರು
ಆಂಕರ್: ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದ ಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ. Body:ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು ತಾಲೂಕುಗಳ ನದಿ ಪಾತ್ರ ಜನರಿಗೆ ತೊಂದರೆ ಉಂಟು ಮಾಡಿದೆ. ಹೊಲಕ್ಕೆ ನೀರು ಹರಿಸಲು ರೈತರು ನದಿಯಲ್ಲಿ ಆಳವಡಿಸಿರುವ ಪಂಪ್ ಸೆಟ್ ಗಳು ಕೆಲವೊಂದು ನೀರು ಪಾಲು ಆಗಿದ್ದು, ವಿದ್ಯುತ್ ಕಂಬಗಳು, ಪರಿವರ್ತಕಗಳು ಮತ್ತು ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯ ಸಿಂಧನೂರು ತಾಲೂಕಿನ ಚಿಂತಮಾದೊಡ್ಡಿ ನೀರು ಜಲಾವೃತ್ತಗೊಂಡಿಸಿದ್ದಾರೆ, ಬಾಲಾಜಿ ಕ್ಯಾಂಪ್ ನಿಂದ ಬೈರೇಶ್ವರ ಕ್ಯಾಂಪ್ ಮಧ್ಯ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಇನ್ನು ನೀರಿಲ್ಲದೆ ನದಿಯ ಸ್ವರೂಪವನ್ನ ಕಳೆದುಕೊಂಡು ತುಂಗಭದ್ರಾ ನದಿ ನೀರಿನಿಂದ ಕಂಗೊಳಿಸುವುದರ ಜತೆಗೆ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿಯನ್ನ ತಂದಿರುವುದು ಜನರ ನೆಮ್ಮದಿಗೆ ಧಕ್ಕೆ ತಂದಿದೆ. ಈಗಾಗಲೇ ಕೃಷ್ಣ ನದಿಯಿಂದ ಜಿಲ್ಲೆಯ ಪ್ರವಾಹ ಮಧ್ಯ ತುಂಗಭದ್ರಾ ನದಿಯಿಂದ ಪ್ರವಾಹ ಎದುರಾಗಿರುವುದು ಜಿಲ್ಲೆಯ ಜನರಿಗೆ ನುಗಲಾರದ ತುತ್ತಾಗಿ ಪರಿಣಾಮಿಸಿದೆ. ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನಲೆಯಿಂದಾಗಿ, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಧನೂರಿನ ದಢೇಸೂಗೂರಿನ ಸರ್ಕಾರಿ ಶಾಲೆ, ಗ್ರಾಮ ಪಂಚಾಯತ್ ಹಾಗೂ ಉರ್ದು ಶಾಲೆ, ಸಿಂಗಾಪೂರದ ಮುಕುಂದ ಸರ್ಕಾರಿ ಶಾಲೆ ಹಾಗೂ ಬಾಲಾಜಿ ಕ್ಯಾಂಪ್ನ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
Conclusion:ಮಾನವಿ ತಾಲೂಕಿನ ಚೀಕಲಪರ್ವಿ, ದದ್ದಲ್, ಖಾತರಕಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ನಿರಾಶ್ರಿತರನ್ನು ಸ್ಥಳಾಂತರಿಸುವ ಗಂಜಿ ಕೇಂದ್ರಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಇದುವರೆಗೂ 602 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರವಾಹ ಪರಿಸ್ಥಿತಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ತ್ವರಿತ ನಿರ್ಧಾರ ಕೈಗೊಳ್ಳಲು ವಾಟ್ಸ್ಪ್ ಗ್ರೂಪ್ ರಚಿಸಲಾಗಿದ್ದು, ಈ ಗುಂಪಿನಲ್ಲಿ ಹಿರಿಯ ಅಧಿಕಾರಿಗಳು, ರಕ್ಷಣ ತಂಡಗಳು ಮತ್ತು ಇತರೆ ಅಧಿಕಾರಿಗಳಿಂದ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಕಂದಾಯ ಸಿಬ್ಬಂದಿ ಮತ್ತು ಪಿಡಿಒಗಳು ಪ್ರವಾಹ ಬಾದಿತ 30 ಗ್ರಾಮಗಳಲ್ಲಿ ತಂಗಿದ್ದಾರೆ. ಅವರು ಪ್ರತಿ ಗಂಟೆಗೆ ತಹಸೀಲ್ದಾರ್ ರಿಂದ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಬೈಟ್.1: ಸಬ್ಜಾಲಿ, ಸ್ಥಳೀಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.