ಲಿಂಗಸುಗೂರು(ರಾಯಚೂರು): ಜಿಲ್ಲೆಯ ಲಿಂಗಸುಗೂರಿನಲ್ಲಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಗಿದೆ. ನಗರದ ಬೆಂಗಳೂರು ಬೈಪಾಸ್ ರಸ್ತೆ ಹಾಗೂ ಗಡಿಯಾರ ವೃತ್ತದ ದೊಡ್ಡಹನುಮಂತ ದೇವಸ್ಥಾನ ಬಳಿ ಹಮ್ಮಿಕೊಂಡಿದ್ದ ರಂಗೋತ್ಸವದಲ್ಲಿ ಶಾಸಕ ಡಿ.ಎಸ್ ಹೂಲಗೇರಿ ಪಾಲ್ಗೊಂಡಿದ್ದರು.
ಬಣ್ಣ ತುಂಬಿದ ಗಡಿಗೆಗಳಿಗೆ ಪೂಜೆ ಸಲ್ಲಿಸಿ, ಬಳಿಕ ಗಡಿಗೆ ಒಡೆದು ಬಣ್ಣದ ನೀರನ್ನು ಎರಚುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಚುನಾಯಿತ ಪ್ರತಿನಿಧಿಗಳು ಪಕ್ಷಬೇಧ ಮರೆತು ಪರಸ್ಪರ ಬಣ್ಣ ಎರಚಿ, ನೃತ್ಯ ಮಾಡಿ ಸಂಭ್ರಮಿಸಿದರು.
ಶಾಸಕ ಡಿ.ಎಸ್.ಹೂಲಗೇರಿ, ಶರಣಗೌಡ ಪಾಟೀಲ ಬಯ್ಯಾಪುರ, ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ, ಜೆಡಿಎಸ್ ರಾಜ್ಯ ಮುಖಂಡ ಸಿದ್ದು ಬಂಡಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು,ಯುವಕರು, ಹಿಂದೂ-ಮುಸ್ಲಿಮರು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿಪಟ್ಟರು.