ರಾಯಚೂರು: ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ಗೂಗಲ್ ಗ್ರಾಮದಿಂದ ಸಿಎಂ ಗ್ರಾಮ ವ್ಯಾಸ್ತವ್ಯದ ಕರೆಗುಡ್ಡದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಜಂಬನಗೌಡ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದುರ್ಗ ತಾಲೂಕಿನ ಜ್ವಲಂತ ಸಮಸ್ಯೆಗಳು ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸುಮಾರು 60 ದಿವಸಗಳ ನಿರಂತರವಾಗಿ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದ್ರೆ ಸಮಸ್ಯೆಗಳಿಗೆ ಪರಿಹಾರವಾಗಿಲ್ಲ ಎಂದರು.
ಇನ್ನು ತಾಲೂಕಿನ ಅಭಿವೃದ್ದಿ ಕಾರ್ಯಗಳು ಕುಠಿತಗೊಂಡಿವೆ. ಹೀಗಾಗಿ ಜೂ.26ರಂದು ಮಾನವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ. ವಾಸ್ತವ್ಯ ಹೂಡುವ ಗ್ರಾಮಕ್ಕೆ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಿಂದ ಜೂ.23ರಂದು ಪಾದಯಾತ್ರೆ ಆರಂಭಿಸಿ ಜೂ.26ರಂದು ಕರೆಗುಡ್ಡ ಗ್ರಾಮಕ್ಕೆ ತಲುಪಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.