ರಾಯಚೂರು: ಹೈಮಾಸ್ಟ್ ವಿದ್ಯುತ್ ದೀಪ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.
ಆಟೋ ಚಾಲಕ ಬಾಬಾ ಹಾಗೂ ಇಜಾಜ್ ಹಸನ್ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಇವರಿಬ್ಬರು ಮಾತನಾಡಿಕೊಂಡು ನಿಂತಿದ್ದ ವೇಳೆ ಬೀದಿ ದೀಪಕ್ಕಾಗಿ ಆಳವಡಿಸಿರುವ ಹೈಮಾಸ್ಟ್ ಲೈಟ್ಗಳು ಏಕಾಏಕಿ ಮೇಲಿಂದ ಬಿದ್ದಿವೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪುರಸಭೆ ಕಾಲಕಾಲಕ್ಕೆ ಬೀದಿ ದೀಪಕ್ಕಾಗಿ ಆಳವಡಿಸಿರುವ ಹೈಮಾಸ್ಟ್ ದೀಪಗಳನ್ನ ನಿರ್ವಹಣೆ ಮಾಡಬೇಕು. ಆದರೆ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.