ETV Bharat / state

ರೈತರ ಮಾರುಕಟ್ಟೆ ಸಮಸ್ಯೆಗೆ ಇಲ್ಲಿದೆ ಪರಿಹಾರ: ರಾಯಚೂರು ಕೃಷಿ ವಿವಿಯ ಅಗ್ರಿ ವಾರ್​​​​​ ರೂಮ್​​ನಿಂದ​ ನೆರವು - ಕೃಷಿ ವಿಶ್ವವಿದ್ಯಾಲಯ ರಾಯಚೂರು

ಲಾಕ್​​​​ಡೌನ್​ನಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಬೆವರು ಸುರಿಸಿ ಬೆಳೆದ ಫಸಲಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಸೂಕ್ತ ಮಾರುಕಟ್ಟೆಯ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ರೈತರ ಸಮಸ್ಯೆ ದೂರ ಮಾಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ನೂತನ ಕಾರ್ಯಕ್ಕೆ ಮುಂದಾಗಿದೆ. ವಿವಿಯ ಆವರಣದಲ್ಲಿ ಅಗ್ರಿ ವಾರ್ ರೂಮ್​​​ ಪ್ರಾರಂಭಿಸಿದೆ.

Here's the solution to the farmers' market problem: Raichur Agricultural University started  Agriwal room assistance
ರೈತರ ಮಾರುಕಟ್ಟೆ ಸಮಸ್ಯೆಗೆ ಇಲ್ಲಿದೆ ಪರಿಹಾರ: ರಾಯಚೂರು ಕೃಷಿ ವಿವಿಯ ಅಗ್ರಿವಾರ್​​​​​ ರೂಮ್​ ನೆರವು
author img

By

Published : Apr 21, 2020, 5:02 PM IST

ರಾಯಚೂರು: ಕೊರೊನಾ ಸೋಂಕಿನ ಪರಿಣಾಮ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ ಇದರಿಂದ ರೈತ ಸಮುದಾಯ ಇನ್ನಿಲ್ಲದ ಸಂಷ್ಟಕ್ಕೆ ಒಳಗಾಗಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆ ರೈತರ ಸಮಸ್ಯೆಯನ್ನು ದೂರ ಮಾಡುವ ಉದ್ದೇಶದಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಗ್ರಿ ವಾರ್​ ರೂಮ್​ ಪ್ರಾರಂಭಿಸಲಾಗಿದೆ. ರೈತರು ಬೆಳೆದ ತೋಟಗಾರಿಕಾ ಬೆಳೆಗಳಿಗೆ, ಕೃಷಿ ಉತ್ಪನ್ನಗಳಿಗೆ ಎಲ್ಲಿ ಮಾರುಕಟ್ಟೆಯ ಲಭ್ಯತೆ ಇದೆ ಎನ್ನುವುದನ್ನು ಅಗ್ರಿ ವಾರ್​​ ರೂಮ್​​ ಮಾಹಿತಿ ನೀಡುತ್ತದೆ.

ರೈತರ ಮಾರುಕಟ್ಟೆ ಸಮಸ್ಯೆಗೆ ಇಲ್ಲಿದೆ ಪರಿಹಾರ: ರಾಯಚೂರು ಕೃಷಿ ವಿವಿಯ ಅಗ್ರಿ ವಾರ್​​​​​ ರೂಮ್​

ದಿನದ 24 ಗಂಟೆಯೂ ರೈತರಿಗಾಗಿ ಸಹಾಯವಾಣಿ (18004250470) ತೆರೆಯಲಾಗಿದ್ದು, ಕರೆ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆ ತಮಗೆ ಎದುರಾಗಿರುವ ಮಾರುಕಟ್ಟೆ ಸಮಸ್ಯೆಯನ್ನೂ ಹೇಳಿಕೊಂಡು ಪರಿಹಾರ ಸಹ ಪಡೆದುಕೊಳ್ಳಬಹುದು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.