ETV Bharat / state

ರಾಯಚೂರಿನ ರಿಮ್ಸ್​ ಆಸ್ಪತ್ರೆಯಲ್ಲಿ ರೋಗಿಗಳ ಅಹವಾಲು ಸ್ವೀಕರಿಸಿದ ಸಚಿವ ರಾಮುಲು!

ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ..

health-minister-stay-in-rims-hospital
author img

By

Published : Oct 14, 2019, 11:58 PM IST

ರಾಯಚೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಭೇಟಿ ನೀಡಿ ಅಹವಾಲು ಸ್ವೀಕಾರ ಮಾಡಿದರು.

ಸಂಜೆ 7.30ರ ಸುಮಾರಿಗೆ ಆಗಮಿಸಿದ ಶ್ರೀರಾಮುಲು ಒಳರೋಗಿಗಳ ಕೊಠಡಿಗಳ ವೀಕ್ಷಿಸಿ ರೋಗಿಗಳಿಂದ ಅಹವಾಲು ಸ್ವೀಕರಿಸಿದರು.

ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಸಚಿವ ಶ್ರೀರಾಮುಲು

ಈ ವೇಳೆ ರೋಗಿಗಳು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು. ಔಷಧಿಗಳ ಚೀಟಿ ಕೊಡುವವರೂ ಇಲ್ಲ, ಸರ್ವರ್ ಬ್ಯುಸಿ ಇದೆ ಎನ್ನುತ್ತಾರೆ. ಕೈಯಲ್ಲೇ ಔಷಧಿ ಚೀಟಿಗಳನ್ನು ಬರೆದು ತರಲು ಹೊರಗಡೆ ಕಳುಹಿಸುತ್ತಾರೆ. ಇಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸೂಚಿಸಿದರು.

Intro:¬ಸ್ಲಗ್: ಶ್ರೀರಾಮುಲು ವಾಸ್ತವ್ಯ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 14-1೦-2019
ಸ್ಥಳ: ರಾಯಚೂರು
ಆಂಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರು ಕೊಠಡಿಗಳನ್ನ ವಾಸ್ತವ್ಯ ಮಾಡಿದ್ದಾರೆ. ಇBody:ದಕ್ಕೂ ಮುನ್ನ ಸಂಜೆ 7:30ರ ಸುಮಾರಿಗೆ ವೇಳೆ ಆಗಮಿಸಿದ ಬಿ.ಶ್ರೀರಾಮುಲು ಆಸ್ಪತ್ರೆಯಲ್ಲಿ ಒಳರೋಗಿಗಳ ಕೊಠಡಿಗಳ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ಕುರಿತು ವಿಚಾರಿಸಿದ್ರು. ಕೊಠಡಿಗಳ ಭೇಟಿ ಮಾಡಲು ತೆರಳುವ ವೇಳೆ ಕೆಲ ರೋಗಿಗಳು ನಮ್ಮಗೆ ಚಿಕಿತ್ಸೆಗೆ ಬಂದಿವೆ. ವೈದ್ಯರು ಚೀಟಿ ಮಾಡಿಕೊಂಡು ಬರುವಂತೆ ಸೂಚಿಸಿದ್ದಾರೆ. ಆದ್ರೆ ಚೀಟಿ ಮಾಡುವರು ಸರ್ವರ್ ಬ್ಯುಸಿಯಿದ್ದಾರೆ ಅಂತಾ ಚೀಟಿ ಮಾಡುತ್ತಿಲ್ಲವೆಂದು ದೂರಿದ್ರು. ಆಗ ಕೈಯಿಂದ ಬರೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ರು. ಇದಾದ ಬಳಿಕ ಮಹಡಿ ಕೊಠಡಿ ತೆರಳುವ ವೇಳೆ ಚಿಕಿತ್ಸೆಗೆ ದಾಖಲು ಆಗಿರುವ ರೋಗಿಗಳು ನಮ್ಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಔಷಧಿಗಳನ್ನ ತರುವಂತೆ ಹೊರಗಡೆ ಚೀಟಿ ಬರೆದುಕೊಂಡುತ್ತಾರೆ ಎಂದು ಆರೋಪಿಸಿದ್ರು. ಆಗ ಅವರೊಂದಿಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.Conclusion: ಈ ವೇಳೆ ರಾಮುಲುಗೆ ಸ್ಥಳೀಯ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿ.ಪಂ. ಸಿಇಒ. ರಿಮ್ಸ್ ವೈದ್ಯಾಧಿಕಾರುಗಳು ಹಾಗೂ ಪಕ್ಷದ ಕೆಲ ಮುಖಂಡರು ಸಾಥ ನೀಡಿದ್ರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.